News Kannada
Friday, February 23 2024
ಕ್ರೀಡೆ

ಭಾರತದಲ್ಲಿ ಇನ್ಮುಂದೆ ನಡೆಯಲ್ಲ ಪಿಂಕ್ ಬಾಲ್ ಟೆಸ್ಟ್

Photo Credit : News Kannada

ದೆಹಲಿ: ಡೇ-ನೈಟ್ ಟೆಸ್ಟ್ ಪಂದ್ಯವನ್ನು ಗುಲಾಬಿ ಚೆಂಡಿನೊಂದಿಗೆ ಆಡಲಾಗುತ್ತದೆ ಆದ್ದರಿಂದ ಈ ಆಟವನ್ನು ಪಿಂಕ್ ಬಾಲ್ ಟೆಸ್ಟ್ ಎನ್ನಲಾಗುತ್ತದೆ. ಇದೀಗ ಭಾರತೀಯ ಮೈದಾನದಲ್ಲಿ ಈ ಪಂದ್ಯಗಳನ್ನು ಆಯೋಜಿಸುವ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಇಲ್ಲಿಯವರೆಗೆ ಗುಲಾಬಿ ಚೆಂಡಿನೊಂದಿಗೆ ಆಡಿದ ಎಲ್ಲಾ ಟೆಸ್ಟ್‌ಗಳು ಕೇವಲ 2-3 ದಿನಗಳಲ್ಲಿ ಕೊನೆಗೊಂಡಿವೆ. ಜನರು 4 ರಿಂದ 5 ದಿನಗಳವರೆಗೆ ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಆದರೆ, ಇದು ಬೇಗನೆ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಬಿಸಿಸಿಐ ಭಾರತದಲ್ಲಿ ಇದನ್ನು ನಿಲ್ಲಿಸಲು ಮುಂದಾಗಿದೆ ಎನ್ನಲಾಗ್ತಿದೆ.

ಬಿಸಿಸಿಐ ಇನ್ನು ಮುಂದೆ ಪುರುಷರ ಕ್ರಿಕೆಟ್‌ನಲ್ಲಿ ಅಥವಾ ಮಹಿಳೆಯರ ಈವೆಂಟ್‌ಗಳಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯವನ್ನು ದೇಶೀಯ ಋತುವಿನಲ್ಲಿ ಆಯೋಜಿಸುವುದಿಲ್ಲ. ಬಿಸಿಸಿಐ ಪಿಂಕ್ ಬಾಲ್ ಟೆಸ್ಟ್ ಆಯೋಜಿಸಲು ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಭಾರತೀಯ ಮಂಡಳಿಯು ಇನ್ನು ಮುಂದೆ ಪಿಂಕ್ ಬಾಲ್ ಟೆಸ್ಟ್‌ಗೆ ಉತ್ಸುಕವಾಗಿಲ್ಲ, ಏಕೆಂದರೆ ಇದು 4 ಅಥವಾ 5 ದಿನಗಳ ಬದಲಿಗೆ 2 ರಿಂದ 3 ದಿನಗಳಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. ಪಿಂಕ್ ಬಾಲ್ ಟೆಸ್ಟ್ ಅನ್ನು ಜನರಲ್ಲಿ ಜನಪ್ರಿಯಗೊಳಿಸಲು ಬಿಸಿಸಿಐ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಜಯ್ ಶಾ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು