ನವದೆಹಲಿ: ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ತಂಡಗಳ ನಡುವಿನ ಏಕ ದಿನ ಸರಣಿಯ ಮೂರನೇ ಪಂದ್ಯ ಬುಧವಾರ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಮೊದಲೆರಡು ಪಂದ್ಯಗಳಲ್ಲಿ ಆಡದೇ ಇರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಂಗಳವಾರ ರಾಜ್‌ಕೋಟ್ ನಲ್ಲಿಗೆ ಹೋಗಿ ತಂಡವನ್ನು ಸೇರಿಕೊಂಡಿದ್ದಾರೆ.
ಅಂತೆಯೇ ರೋಹಿತ್ ಶರ್ಮಾ ಮುಂಬಯಿ ಏರ್‌ಪೋರ್ಟ್ ಮೂಲಕ ಗುಜರಾತ್‌ನ ನಗರಕ್ಕೆ ಪ್ರಯಾಣ ಮಾಡಿದ್ದಾರೆ. ಈ ವೇಳೆ ಅವರು ಪತ್ನಿಯನ್ನು ಬೀಳ್ಕೊಡುವಾಗ ಸಿಹಿ ಮುತ್ತು ನೀಡಿದ್ದಾರೆ. ಈ ಕ್ಯೂಟ್ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಕಾರಿನಿಂದ ಇಳಿದ ತಕ್ಷಣ ರೋಹಿತ್ ಶರ್ಮಾ ಒಳಗೆ ಬಗ್ಗಿ ಪತ್ನಿಗೆ ರಿತಿಕಾ ಅವರಿಗೆ ಮುತ್ತು ನೀಡುತ್ತಾರೆ. ಬಳಿಕ ಅವರು ತಮ್ಮ ಬ್ಯಾಗ್ ಎತ್ತಿಕೊಂಡು ಹೊರಡುತ್ತಾರೆ. ಅವರು ಮುಂದೆ ಸಾಗುತ್ತಿದ್ದಂತೆ ರಿತಿಕಾ ಅವರು ಟಾಟಾ ಮಾಡುತ್ತಾರೆ. ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಹಿಟ್‌ಮ್ಯಾನ್ ಗೆಟ್ ಹಗ್ ಫ್ರಮ್ ವೈಫಿ ಎಂದು ಬರೆಯಲಾಗಿದೆ.
Rohit Sharma on the way to Rajkot for the 3rd ODI. [Viral Bhayani]
– Cutest video of the day.pic.twitter.com/ysOSoKjEkS
— Johns. (@CricCrazyJohns) September 26, 2023