News Kannada
Monday, March 04 2024
ಕ್ರೀಡೆ

ವಿಟಾಲಿಟಿ ಟಿ20: ಚಾಂಪಿಯನ್​ ಪಟ್ಟಕ್ಕೇರಿದ ಸೋಮರ್‌ಸೆಟ್‌

T20 Blast 2023
Photo Credit : Twitter

ಇಂಗ್ಲೆಂಡ್​ನಲ್ಲಿ ನಡೆದ ವಿಟಾಲಿಟಿ ಟಿ20 ಬ್ಲಾಸ್ಟ್‌ ಫೈನಲ್ ಪಂದ್ಯದಲ್ಲಿ ಎಸೆಕ್ಸ್ ತಂಡವನ್ನು ಮಣಿಸಿದ ಸೋಮರ್‌ಸೆಟ್‌ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಈ ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವುದರೊಂದಿಗೆ ತನ್ನ 18 ವರ್ಷಗಳ ಕಾಯುವಿಕೆಯನ್ನು ಸಹ ಕೊನೆಗೊಳಿಸಿದೆ. ಈ ಲೀಗ್​ನಲ್ಲಿ 2005ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದ ಸೋಮರ್‌ಸೆಟ್‌, ಇದೀಗ ತನ್ನ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿದೆ.

ಸೋಮರ್‌ಸೆಟ್‌ನ ಈ ಮಹಾನ್ ಯಶಸ್ಸಿನ ಹಿಂದೆ ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರ ಪಾತ್ರ ದೊಡ್ಡದಿದೆ. ಒಂದೇ ದಿನ ನಡೆದ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಸೋಮರ್‌ಸೆಟ್‌ ಪರ ಶ್ರೇಷ್ಠ ಪ್ರದರ್ಶನ ನೀಡಿದ ಮ್ಯಾಟ್ ಹೆನ್ರಿ ಈ ಎರಡೂ ಪಂದ್ಯಗಳಲ್ಲಿ 7 ವಿಕೆಟ್ ಪಡೆದರು.

ಈ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೋಮರ್‌ಸೆಟ್ 20 ಓವರ್‌ಗಳಲ್ಲಿ 145 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಎಸೆಕ್ಸ್ ತಂಡವು ಪೂರ್ಣ 20 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗದೆ ಕೇವಲ 18.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 131 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದರೊಂದಿಗೆ 14 ರನ್​ಗಳಿಂದ ಚಾಂಪಿಯನ್​ ಪಟ್ಟವನ್ನು ಕಳೆದುಕೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು