News Kannada
Friday, February 23 2024
ಕ್ರೀಡೆ

ವಿಜಯ್ ಹಜಾರೆ ಟೂರ್ನಿ: ಕರ್ನಾಟಕಕ್ಕೆ ಸತತ 4ನೇ ಜಯ

ಜೆ.ಸುಚಿತ್‌ರ ಆಕರ್ಷಕ ಬೌಲಿಂಗ್ ಹಾಗೂ ದೇವದತ್ ಪಡಿಕ್ಕಲ್‌ರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 2023ರ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಸತತ 4ನೇ ಗೆಲುವು ಸಾಧಿಸಿದೆ. ಬುಧವಾರ ಇಲ್ಲಿ ನಡೆದ ಬಿಹಾರ ವಿರುದ್ಧದ ‘ಸಿ’ ಗುಂಪಿನ ಪಂದ್ಯದಲ್ಲಿ ರಾಜ್ಯ ತಂಡ 7 ವಿಕೆಟ್‌ಗಳಿಂದ ಜಯಿಸಿತು.
Photo Credit : News Kannada

ಅಹಮದಾಬಾದ್: ಜೆ.ಸುಚಿತ್‌ರ ಆಕರ್ಷಕ ಬೌಲಿಂಗ್ ಹಾಗೂ ದೇವದತ್ ಪಡಿಕ್ಕಲ್‌ರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 2023ರ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಸತತ 4ನೇ ಗೆಲುವು ಸಾಧಿಸಿದೆ. ಬುಧವಾರ ಇಲ್ಲಿ ನಡೆದ ಬಿಹಾರ ವಿರುದ್ಧದ ‘ಸಿ’ ಗುಂಪಿನ ಪಂದ್ಯದಲ್ಲಿ ರಾಜ್ಯ ತಂಡ 7 ವಿಕೆಟ್‌ಗಳಿಂದ ಜಯಿಸಿತು.

ಮೊದಲು ಬ್ಯಾಟ್ ಮಾಡಿದ ಬಿಹಾರ, ಸಕಿಬುಲ್ ಗನಿ ಅವರ ಶತಕ (100 ಎಸೆತದಲ್ಲಿ 113* ರನ್)ದ ಹೊರತಾಗಿಯೂ 50 ಓವರಲ್ಲಿ 7 ವಿಕೆಟ್‌ಗೆ 217 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಕರ್ನಾಟಕ 33.4 ಓವರಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಇದಕ್ಕೂ ಮುನ್ನ 33.3 ಓವರಲ್ಲಿ 110 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ಬಿಹಾರಕ್ಕೆ ಸಕಿಬುಲ್ ಹಾಗೂ ನಾಯಕ ಅಶುತೋಷ್ ಅಮನ್(33) ಆಸರೆಯಾದರು. ಇವರಿಬ್ಬರು ಮುರಿಯದ 8ನೇ ವಿಕೆಟ್‌ಗೆ 107 ರನ್ ಸೇರಿಸಿದರು. ಕರ್ನಾಟಕದ ಸ್ಪಿನ್ನರ್ ಸುಚಿತ್ 10 ಓವರಲ್ಲಿ 2 ಮೇಡನ್ ಸಹಿತ ಕೇವಲ 27 ರನ್ ನೀಡಿ 3 ವಿಕೆಟ್ ಕಿತ್ತರು. ಈ ಜಯದ ಹೊರತಾಗಿಯೂ ಕರ್ನಾಟಕ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕಿಳಿದಿದೆ. 4 ಗೆಲುವು ಸಾಧಿಸಿರುವ ಹರ್ಯಾಣ ನೆಟ್ ರನ್‌ರೇಟ್ ಆಧಾರದ ಮೇಲೆ ಮೊದಲ ಸ್ಥಾನ ಪಡೆದಿದೆ. ಕರ್ನಾಟಕಕ್ಕೆ ಇನ್ನು 3 ಪಂದ್ಯ ಬಾಕಿ ಇದ್ದು, ಗುಂಪಿನಲ್ಲಿ ಮೊದಲ ಸ್ಥಾನ ಪಡೆದು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು