ಕೊಲಂಬೊ: ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿಗೆ ಯಾವುದೇ ಹಮ್ಮುಬಿಮ್ಮುಗಳಿಲ್ಲ ಎನ್ನುವುದನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ. ತಾವೊಬ್ಬ ಸ್ಟಾರ್ ಕ್ರಿಕೆಟಿಗನಾಗಿದ್ದರೂ ಕೂಡಾ ವಾಟರ್ ಬಾಯ್ ಕೆಲಸ ಮಾಡಲು ಹಿಂಜರಿಯುವುದಿಲ್ಲ ಎನ್ನುವುದನ್ನು ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಬಾಂಗ್ಲಾದೇಶ ಎದುರಿನ ಪಂದ್ಯದ ವೇಳೆ ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿದ್ದಾರೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಸೇರಿದಂತೆ 5 ಆಟಗಾರರಿಗೆ ವಿಶ್ರಾಂತಿ ನೀಡಿದೆ. ಹೀಗಾಗಿ ವಿರಾಟ್ ಕೊಹ್ಲಿ ಡಗೌಟ್‌ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದರು.
Virat Kohli – What a fantastic character.
He is enjoying each & every moment. pic.twitter.com/EVAHXmM8m1
— Johns. (@CricCrazyJohns) September 15, 2023
ಇದೇ ಸಂದರ್ಭದಲ್ಲಿ ಡ್ರಿಂಕ್ಸ್ ಬ್ರೇಕ್ ವೇಳೆ ಸ್ವತಃ ವಿರಾಟ್ ಕೊಹ್ಲಿ ವಾಟರ್ ಬಾಯ್ ಆಗಿ ಮೈದಾನಕ್ಕೆ ಓಡೋಡಿ ಬರುವ ಮೂಲಕ ಗಮನ ಸೆಳೆದಿದ್ದಾರೆ. ಬಾಂಗ್ಲಾದೇಶದ ಬ್ಯಾಟರ್ ಅನ್‌ಮೋಲ್ ಹಕ್ ಔಟಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ, ಜೋಶ್‌ನಲ್ಲಿ ನೀರು ಹಿಡಿದುಕೊಂಡು ಕುಣಿದಾಡುತ್ತಾ ಮೈದಾನಕ್ಕೆ ಓಡೋಡಿ ಬರುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ವಿರಾಟ್‌ರ ಈ ಕಾಮಿಡಿ ಸೆನ್ಸ್ ಕಂಡು ಸಹ ಆಟಗಾರರೂ ನಗಲಾರಂಭಿಸಿದರು. ವಿರಾಟ್ ಕೊಹ್ಲಿಯ ಟೀಮ್ ಸ್ಪಿರಿಟ್ ಕಂಡು ಅಭಿಮಾನಿಗಳು ಅವರಿಗೆ ಸೆಲ್ಯೂಟ್ ಮಾಡುತ್ತಿರುವುದು ಕಂಡುಬಂತು.