News Kannada
Sunday, March 03 2024
ಕ್ರೀಡೆ

ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು ಎಲ್ಇಡಿ ಪರದೆಗೆ ಕಲ್ಲೆಸೆತ

World Cup: India's defeat against Australia throws stones at the LED screen
Photo Credit : News Kannada

ವಿಜಯನಗರ: ಈ ಬಾರಿಯ ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಆಸೀಸ್ ಪಡೆ ಗೆದ್ದಿದೆ. ಭಾರತ ಸೋತಿದ್ದಕ್ಕೆ ಕೆಲ ಕಿಡಿಗೇಡಿಗಳು ಸಾರ್ವಜನಿಕರ ವೀಕ್ಷಣೆಗೆ ಅಳವಡಿಸಲಾಗಿದ್ದ ಎಲ್​ಇಡಿ ಪರದೆಗೆ ಕಲ್ಲು ಎಸೆದಿರುವ ಘಟನೆ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಸೋಲನ್ನು ಸಹಿಸಿಕೊಳ್ಳದ ಕೆಲ ಕಿಡಿಗೇಡಿಗಳು‌ ಕೊನೆಯ ಓವರ್ ವೇಳೆ ಕಲ್ಲು ಎಸೆದಿದ್ದಾರೆ. ಸಾರ್ವಜನಿಕರು ವಿಶ್ವಕಪ್ ಫೈನಲ್ ಪಂದ್ಯವನ್ನು ದೊಡ್ಡ ಪರದೆಯಲ್ಲಿ ನೋಡಲೆಂದು ಸರ್ಕಾರ ಎಲ್​​ಇಡಿ ಹಾಕಿಸಿತ್ತು. ಕ್ರೀಡಾ ಇಲಾಖೆಯಿಂದ ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್​​ಇಡಿ ಹಾಕುವಂತೆ ಸರ್ಕಾರ ಸೂಚನೆ ನೀಡಿತ್ತು.

ಭಾರತ 50 ಓವರ್‌ಗೆ 10 ವಿಕೆಟ್‌‌ ನಷ್ಟಕ್ಕೆ 240 ರನ್‌ ಗಳಿಸುವ ಮೂಲಕ 241 ರನ್‌ ಟಾರ್ಗೆಟ್‌‌ ನೀಡಿತು. ಈ ಮೊತ್ತ ಬೆನ್ನಟ್ಟಿದ ಆಸೀಸ್‌ 43 ಓವರ್‌ಗೆ 4 ವಿಕೆಟ್‌‌ ನಷ್ಟಕ್ಕೆ 241 ರನ್‌ ಗಳಿಸುವ ಮೂಲಕ ಬರೋಬ್ಬರಿ 6 ವಿಕೆಟ್‌ಗಳ ಜಯ ದಾಖಲಿಸಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು