NewsKarnataka
Wednesday, January 19 2022

MYSURU

ಸೂಳೆಕೆರೆ ಅಭಿವೃದ್ಧಿಗೆ ಶಾಸಕ ಡಿ.ಸಿ.ತಮ್ಮಣ್ಣ ಮನವಿ

11-Sep-2021 ಮೈಸೂರು

ಭಾರತೀನಗರ: ಇಲ್ಲಿಗೆ ಸಮೀಪದ ಮುಟ್ಟನಹಳ್ಳಿ ಹೊರ ವಲಯದಲ್ಲಿರುವ ಸೂಳೆಕೆರೆ ಮತ್ತು ನಾಲೆಯನ್ನು ಅಭಿವೃದ್ಧಿ ಗೊಳಿಸುವಂತೆ ಶಾಸಕ ಡಿ.ಸಿ.ತಮ್ಮಣ್ಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬೈಕ್ ನಲ್ಲಿ ಸಂಚರಿಸಿ ಕೆರೆ ಮತ್ತು ನಾಲೆಯನ್ನು ವೀಕ್ಷಣೆ ಮಾಡಿ ಮಾತನಾಡಿದ ಶಾಸಕ ಡಿ.ಸಿ.ತಮ್ಮಣ್ಣ ಅವರು, ಕೆರೆಯಲ್ಲಿ ಬೆಳೆದಿರುವ ಜೊಂಡುಗಳನ್ನು ತೆರವುಗೊಳಿಸದಿದ್ದರೆ ಕೆರೆಗೆ ನೀರು ತುಂಬಿಕೊಂಡಾಗ ನಾಲೆಗಳಿಗೆ ನೀರು ಸಾಗದೆ ಕೆರೆಯ ಆಜು ಬಾಜಿನಲ್ಲಿರುವ ಜಮೀನುಗಳಿಗೆ ನೀರುನುಗ್ಗಿ ರೈತರ ಬೆಳೆಗಳು ನಷ್ಟವಾಗುತ್ತವೆ. ಹಾಗಾಗಿ ಕೂಡಲೇ ಕೆರೆಯಲ್ಲಿರುವ ಜೊಂಡುಗಳನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಹೇಳಿದರಲ್ಲದೆ, ಸ್ಥಳೀಯ ರೈತರಿಂದ ಮತ್ತು ಕಾವೇರಿ ನೀರಾವರಿ ನಿಗಮದ ಸವಡೆಗಳಿಂದ ಜೊಂಡನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು. ಹಾಗಾಗಿ ಕೆರೆ ವೀಕ್ಷಣೆಗೆ ಬಂದಿರುವುದಾಗಿ ಅವರು ಹೇಳಿದರು. ಬೆಂಗಳೂರಿನ ಬೆಳಂದೂರು ಕೆರೆಯಲ್ಲಿ ಹೇಗೆ ಜೊಂಡನ್ನು ತೆಗೆಯಲು ವೀಡ್ ಕಟ್ಟರ್ ಬೋಟ್ ಉಪಯೋಗಿಸುತ್ತಾರೆಯೋ ಹಾಗೆಯೇ ಇಲ್ಲಿ ಕೂಡ ಜೊಂಡುಗಳನ್ನು ತೆಗೆಯಲು ವೀಡ್ಕಟ್ಟರ್ ಬೋಟ್ಗೆ ಅನುದಾನಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಿಂದ ಶಾಶ್ವತ ಪರಿಹಾರ ಸಿಗಲಿದೆ. ಸೂಳೆಕೆರೆ ನಾಲೆ ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿರುವಂತಹದ್ದಾಗಿದೆ. ಇದನ್ನು ಅಭಿವೃದ್ದಿ ಪಡಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು....

Know More

ಮೈಸೂರು ದಸರಾ ಜಂಬೂಸವಾರಿಯ ಸೂತ್ರಧಾರಿಗಳು..!

11-Sep-2021 ಮೈಸೂರು

ಮೈಸೂರು: ಮೈಸೂರು ದಸರಾದಲ್ಲಿ ಗಜಪಡೆಯದ್ದೇ ಕಾರುಬಾರು.. ಗಜಪಡೆಯಿಲ್ಲದ ದಸರಾವನ್ನು ಯಾರಿಂದಲೂ  ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಗಜಪಡೆ ಮೈಸೂರು ಅರಮನೆಗೆ ಪ್ರವೇಶ ಪಡೆದ ದಿನದಿಂದಲೇ ದಸರಾಕ್ಕೆ ಕಳೆ ಬರುತ್ತದೆ. ಸೆ.13ರಂದು ನಾಗರಹೊಳೆಯ ವೀರನಹೊಸಳ್ಳಿಯಲ್ಲಿ ಗಜಪಯಣ ನಡೆಯಲಿದ್ದು, ಈ...

Know More

ಬಾಗಿನದ ಮೊರಕ್ಕೆ ಬೇಡಿಕೆ ಕುಸಿತ: ತಯಾರಕರು ಕಂಗಾಲು

10-Sep-2021 ಮೈಸೂರು

ಮೈಸೂರು: ಗೌರಿ ಹಬ್ಬಕ್ಕೆ ಬಾಗಿನ ನೀಡಲು ಮೊರ ಬಹು ಮುಖ್ಯವಾಗಿದ್ದು, ಮೊದಲೆಲ್ಲ ಹಬ್ಬಕ್ಕೆ ತಿಂಗಳು ಇರುವಾಗಲೇ ಮೊರದ ತಯಾರಿ ಬಿಡುವಿಲ್ಲದೆ ನಡೆಯುತ್ತಿತ್ತಲ್ಲದೆ, ವ್ಯಾಪಾರವೂ ಜೋರಾಗಿಯೇ ಸಾಗುತ್ತಿತ್ತು ಆದರೆ ಇದೀಗ ಕೊರೊನಾ ಎಲ್ಲದಕ್ಕೂ ವಿಘ್ನ ತಂದಿದೆ....

Know More

ನಾಗರಹೊಳೆ ಕಾಡಂಚಿನ ಜನರಿಗೆ ತಪ್ಪದ ಕಾಡಾನೆ ಕಾಟ..!

09-Sep-2021 ಮಡಿಕೇರಿ

ಹನಗೋಡು : ನಾಗರಹೊಳೆ ಕಾಡಂಚಿನ ಜನ ಕಾಡಾನೆಗಳ ಕಾಟದಿಂದ ಮುಕ್ತಿಪಡೆಯುವುದು ಕನಸಿನ ಮಾತಾಗಿದೆ. ಕಾಡಾನೆಗಳು ಕಾಡಿನಿಂದ ನಾಡಿಗೆ ಬಾರದಂತೆ ಅರಣ್ಯ ಇಲಾಖೆ ಕೈಗೊಂಡಿದ್ದ ಕೆಲವು ಕ್ರಮಗಳು ವಿಫಲಗೊಂಡಿದ್ದರಿಂದ ಮತ್ತೆ ಕಾಡಾನೆಗಳು ನಾಡಿಗೆ ಲಗ್ಗೆಯಿಡುತ್ತಿದ್ದು ರೈತರು...

Know More

ಮೈಸೂರಿನಲ್ಲಿ ಗಣೇಶೋತ್ಸವಕ್ಕೆ ಕೋವಿಡ್ ನಿಯಮ ಪಾಲನೆ ಕಡ್ಡಾಯ

08-Sep-2021 ಮೈಸೂರು

ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ  ಗಣೇಶ ಚತುರ್ಥಿ ಹಬ್ಬದ ಆಚರಣೆಯನ್ನು ಕೋವಿಡ್-19  ನಿಯಮ ಪಾಲನೆಯೊಂದಿಗೆ  ಆಚರಿಸುವಂತೆ ನಗರದ ಜನತೆಗೆ ಸೂಚಿಸಿರುವ ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ  ಅವರು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಆದೇಶಿಸಿದ್ದಾರೆ. ಈ ಸಂಬಂಧ ಮೈಸೂರು ನಗರದ ಪೊಲೀಸ್ ಅಧಿಕಾರಿಗಳ ಸಭೆಯನ್ನು ನಡೆಸಿರುವ ಅವರು  ಸರ್ಕಾರದ ಮಾರ್ಗಸೂಚಿಗಳನ್ನು...

Know More

ಮೈಸೂರು ದಸರಾ ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ ಬಿಡುಗಡೆ

08-Sep-2021 ಮೈಸೂರು

ಮೈಸೂರು : ಮೈಸೂರು ದಸರಾ ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿಯನ್ನು ಸರ್ಕಾರ ಈಗಾಗಲೇ  ಬಿಡುಗಡೆ ಮಾಡಲಾಗಿದೆ. ಇಂದು ಮೈಸೂರಿನಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯ  ಬಳಿಕ  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸುದ್ದಿಗೋಷ್ಠಿ...

Know More

ರೈತರ ಮಗಳ ಭರ್ಜರಿ ಚಿನ್ನದ ಬೇಟೆ

07-Sep-2021 ಮೈಸೂರು

ಮೈಸೂರು : ಮಂಗಳವಾರ ಉತ್ತರಕನ್ನಡ ಜಿಲ್ಲೆಯ ಶಿರಸಿ ಮೂಲದ ಚೈತ್ರಾ ನಾರಾಯಣ ಹೆಗ್ಡೆ ಎಂಬ  ಗ್ರಾಮೀಣ ಪ್ರತಿಭೆಯ ಜೀವನದಲ್ಲಿ ಸ್ಮರಣೀಯ ದಿನವಾಗಿದೆ. ರಸಾಯನಶಾಸ್ತ್ರದ ವಿದ್ಯಾರ್ಥಿನಿ ಚೈತ್ರಾ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 20 ಚಿನ್ನದ ಪದಕಗಳನ್ನು ಮತ್ತು...

Know More

ಅರಮನೆನಗರಿಯಲ್ಲಿ ಕಾಣದ ದಸರಾ ಸಂಭ್ರಮ…

05-Sep-2021 ಮೈಸೂರು

ಮೈಸೂರು: ಕೊರೊನಾ ವಕ್ಕರಿಸುವ ಮುನ್ನ ಮೈಸೂರು ದಸರಾ ಅಂದ್ರೆ ಸಾಕು ಒಂದೆರಡು ತಿಂಗಳ ಮೊದಲೇ ಸಂಭ್ರಮ ಮನೆ ಮಾಡಿಬಿಡುತ್ತಿತ್ತು. ಮನೆಗಳಿಂದ ಆರಂಭವಾಗಿ ನಗರದವರೆಗೆ ಅದರ ಸಡಗರ ಎದ್ದು ಕಾಣುತ್ತಿತ್ತು. ಇಡೀ ನಗರ ದಸರಾ ಸಂಭ್ರಮದಲ್ಲಿ...

Know More

ಮೈಸೂರು ಅರಮನೆ ಒಳಾಂಗಣದಲ್ಲಿ ಚಿತ್ರೀಕರಣಕ್ಕಿದ್ದ ನಿರ್ಬಂಧ ತೆರವು

05-Sep-2021 ಬೆಂಗಳೂರು

ಬೆಂಗಳೂರು: ಇಷ್ಟುದಿನಗಳ ಕಾಲ ಮೈಸೂರು ಅರಮನೆ ಒಳಾಂಗಣದಲ್ಲಿ ಚಿತ್ರೀಕರಣಕ್ಕಿದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದೆ. ಫ್ಲ್ಯಾಷ್ ರಹಿತ ಛಾಯಾಚಿತ್ರ ಕ್ಲಿಕ್ಕಿಸಲು ವಿಡಿಯೋ ಚಿತ್ರೀಕರಣ ಸೇರಿದಂತೆ ಎಲ್ಲಾ ರೀತಿಯ ಚಿತ್ರೀಕರಣಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ....

Know More

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ

04-Sep-2021 ಕ್ರೀಡೆ

ಮೈಸೂರು : ಶೀಘ್ರದಲ್ಲೇ ನಗರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಈ ಸಂಬಂಧ ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)...

Know More

ದುಷ್ಕರ್ಮಿಗಳಿಂದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ

03-Sep-2021 ಮೈಸೂರು

ಮೈಸೂರು : ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿ ಸಾಮೂಹಿಕ ಅತ್ಯಾಚಾರದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ವಿದ್ಯಾರ್ಥಿನಿಯ ಮೇಲೆ  ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹಾಡು –...

Know More

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವನ್ನು ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ಪಾರ್ಕ್ ಎಂದು ಮರುನಾಮಕರಣ ಮಾಡವಂತೆ ಪತ್ರ ಬರೆದ ಸಂಸದ ಪ್ರತಾಪ ಸಿಂಹ

02-Sep-2021 ಮೈಸೂರು

ಮೈಸೂರು : ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ್ನು, ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡುವಂತೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರು ರಾಜ್ಯ ಅರಣ್ಯ ಸಚಿವ ಉಮೇಶ್ ಕತ್ತಿ...

Know More

ಸಿರಿಧಾನ್ಯಗಳಿಂದ ಮಧುಮೇಹ-ರಕ್ತದೊತ್ತಡ ನಿಯಂತ್ರಣ

01-Sep-2021 ಮೈಸೂರು

ಮೈಸೂರು: ಸಿರಿಧಾನ್ಯಗಳ ಸೇವನೆಯಿಂದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು  ಸಾಧ್ಯವಾಗುತ್ತದೆ ಎಂದು  ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ  ಡಾ. ಮಹಾಂತೇಶಪ್ಪ ಹೇಳಿದರು. ಸುತ್ತೂರಿನಲ್ಲಿ  ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ನಂಜನಗೂಡು ಇವರ...

Know More

ಮೈಸೂರಲ್ಲಿ ಭಾನುವಾರವೂ ಮುಂದುವರೆದ ಕರ್ಫ್ಯೂ

29-Aug-2021 ಮೈಸೂರು

ಮೈಸೂರು: ವಾರಾಂತ್ಯ ಕರ್ಫ್ಯೂ ಮೈಸೂರಿನಲ್ಲಿ ಭಾನುವಾರವೂ ಮುಂದುವರೆದಿದ್ದು, ಅಲ್ಲೊಂದು ಇಲ್ಲೊಂದು ವಾಹನಗಳ ಓಡಾಟ ಬಿಟ್ಟರೆ ನಗರ ಬಿಕೋ ಎನ್ನುತ್ತಿತ್ತು. ಮೈಸೂರು ನಗರದಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಬೇಕೆಂದು ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ...

Know More

ಆರ್ ಎಸ್ ಎಸ್ ಬಗ್ಗೆ ಆರ್ ಧ್ರುವನಾರಾಯಣ ಹೇಳಿಕೆ ಅವರ ಬೌದ್ಧಿಕ ಅಸ್ಥಿರತೆಗೆ ನಿದರ್ಶನ : ಸಚಿವ ಸುನೀಲ್ ಕುಮಾರ್

25-Aug-2021 ಮೈಸೂರು

ಮೈಸೂರು :  ಸಂಘ ಪರಿವಾರದ ಬಗ್ಗೆ ಕಾಂಗ್ರೆಸ್ ನಾಯಕ ಆರ್. ಧ್ರುವನಾರಾಯಣ್ ನೀಡಿರುವ ಹೇಳಿಕೆ ಅವರ ಬೌದ್ಧಿಕ ದಿವಾಳಿತನದ ಪರಮಾವಧಿ ಎಂದು ಇಂಧನ ಹಾಗೂ ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಮೈಸೂರಿನಲ್ಲಿಂದು...

Know More
Subscribe to our Brand New YouTube Channel

Subscribe Newsletter

Get latest news karnataka updates on your email.