News Karnataka Kannada
Friday, April 19 2024
Cricket

ಕುಂತಿಬೆಟ್ಟದಲ್ಲಿ ರೈತರ ತರಬೇತಿ ಕಾರ್ಯಾಗಾರ

24-Sep-2021 ಮೈಸೂರು

ಪಾಂಡವಪುರ : ಕುಂತಿಬೆಟ್ಟದಲ್ಲಿ ವಿಜ್ಞಾನದ ಕಡೆಗೆ ಅನ್ನದಾತನ ನಡಿಗೆ ಘೋಷವಾಕ್ಯದಡಿ ಮಂಡ್ಯ ಜಿಲ್ಲೆಯ ಪ್ರಗತಿಪರ ರೈತರು ಆಯೋಜಿಸಿದ್ದ ರೈತರ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿದ ಅವರು, ರೈತನ ಬದುಕು ಸಂಪೂರ್ಣ ನಷ್ಟದಲ್ಲಿದೆ. ಕಬ್ಬು, ಭತ್ತವನ್ನು ಮಾತ್ರ ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು ರೈತ ಬೆಳೆದ ಬೆಲೆಗೆ ಸೂಕ್ತ ಬೆಲೆ...

Know More

ಅಂಕೇಗೌಡರ ಪುಸ್ತಕ ಮನೆಗೆ ಸಾಹಿತಿ ದೇಮ ದಂಪತಿ ಭೇಟಿ

23-Sep-2021 ಮೈಸೂರು

ಪಾಂಡವಪುರ : ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿರುವ ಲಿಮ್ಕಾ ದಾಖಲೆಯ ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕ ಮನೆಗೆ ಹಿರಿಯ ಸಾಹಿತಿ ದೇವನೂರು ಮಹದೇವ ಹಾಗೂ ಪತ್ನಿ, ಮೈಸೂರು ಯುವರಾಜ ಕಾಲೇಜು ನಿವೃತ್ತ ಪ್ರಾಂಶುಪಾಲೆ ಸುಮಿತ್ರಾಬಾಯಿ ಭೇಟಿ...

Know More

ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಾಪಂ ಕಚೇರಿಗೆ ಮುತ್ತಿಗೆ

21-Sep-2021 ಮೈಸೂರು

ಪಾಂಡವಪುರ: ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ವಿಚಾರವಾಗಿ ಗ್ರಾ.ಪಂ ಸದಸ್ಯೆ ಹಾಗೂ ನಾಲ್ವರು ರೈತ ಮುಖಂಡರ ಮೇಲೆ ಸುಳ್ಳು ದೂರು ದಾಖಲಿಸಿರುವ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜು ವಿರುದ್ಧ ಸೂಕ್ತ ಕ್ರಮಕ್ಕೆ...

Know More

ಕೋವಿಡ್ ನಿಯಂತ್ರಣದಲ್ಲಿ ಮಂಡ್ಯವೇ ಮೊದಲು

07-Sep-2021 ಮಂಡ್ಯ

ಮಂಡ್ಯ : ರಾಜ್ಯದಲ್ಲಿಯೇ ಕೋವಿಡ್ ಸೋಂಕನ್ನು ಉತ್ತಮವಾಗಿ ನಿರ್ವಹಣೆ ಮಾಡುವಲ್ಲಿ ಮಂಡ್ಯ ಜಿಲ್ಲೆ ಮುಂಚೂಣಿಯಲ್ಲಿದೆ ಎಂದು ಹೇಳಲು ಸಂತೋ?ವಾಗುತ್ತದೆ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ ಅಂಡ್ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ ಹೇಳಿದರು. ಪಾಂಡವಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು ಹೊಂಬಾಳೆ ಗ್ರೂಪ್ ನ ಸಿ.ಎಸ್.ಆರ್ ಯೋಜನೆಯಡಿ ನೂತನವಾಗಿ ಸ್ಥಾಪಿಸಿರುವ ಆಮ್ಲಜನಕದ ಉತ್ಪಾದನ ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವೇ ನಲುಗುತ್ತಿರುವಾಗ ಬಹಳ ಧೈರ್ಯದಿಂದ ಜಿಲ್ಲೆಯಲ್ಲಿ ಕೋವಿಡ್ ಹತೋಟಿಗೆ ತರುವಲ್ಲಿ ಜಿಲ್ಲೆಯ ಸಚಿವರು, ಎಲ್ಲ ಶಾಸಕರು ಹಾಗೂ ಜಿಲ್ಲಾಡಳಿತದ ಶ್ರಮವನ್ನು ಶ್ಲಾಘಿಸಿದರು. ಆಕ್ಸಿಜನ್ ಉತ್ಪಾzನಾ ಘಟಕಗಳ ಜೊತೆಗೆ ಜನರೇಟರ್ ಪ್ಲಾಂಟ್‌ಗಳು ಹಾಗೂ ಇತರೆ ಅವಶ್ಯಕವಿರುವ ಎಲ್ಲ್ಲ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದ್ದು, ಇದೊಂದು ಉತ್ತಮ ಪ್ಲಾಂಟ್ ಎಂದರು. ಮಂಡ್ಯ ಜಿಲ್ಲೆಗೆ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು ಹಾಗೂ ಕೋವಿಡ್ ಮೂರನೇ ಅಲೆ ತಡೆಗಟ್ಟುವಲ್ಲಿ ಲಸಿಕಾಕರಣವನ್ನು ಯಶಸ್ವಿಗೊಳಿಸಲು ವ್ಯವಸ್ಥೆ ಮಾಡಲಾಗುವುದು ಎಂದರು. ರೇ?, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಕೆ.ಸಿ ನಾರಾಯಣಗೌಡರವರು ಮಾತನಾಡಿ, ಎರಡನೇ ಅಲೆಯಲ್ಲಿ ಆಕ್ಸಿಜನ್ ಪೂರೈಸುವಲ್ಲಿ ಬಹಳ ಕ?ವಾಗಿತ್ತು. ಆದರೆ ಆ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಆಕ್ಸಿಜನ್ ಉತ್ಪಾದನ ಘಟಕ ನಿರ್ಮಾಣದಲ್ಲಿ ಪಟ್ಟ ಪ್ರಯತ್ನ ಇಂದು ಕೈಗೂಡಿದೆ ಎಂದರು. ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯ ಪಾಂಡವಪುರ ಹಾಗೂ ಕೆ.ಆರ್ ಪೇಟೆ ತಾಲ್ಲೂಕು, ನಂತರ ಮಳವಳ್ಳಿ ನಂತರದಲ್ಲಿ ಮಂಡ್ಯ ತಾಲ್ಲೂಕುಗಳಲ್ಲಿ ಆಕ್ಸಿಜನ್ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗಿದೆ. ಮುಂದುವರೆದಂತೆ ಸಿ.ಎಸ್.ಆರ್ ನಿಧಿಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಆಕ್ಸಿಜನ್ ಪ್ಲಾಂಟ್ ಸ್ಥಾಪನಾ ಕಾರ್ಯ ನಡೆಯುತ್ತಿದೆ ಎಂದರು. ನಂತರ ಪಾಂಡವಪುರ ತಾಲ್ಲೂಕಿನ ಚಿನಕುರುಳಿ ಸರ್ಕಾರಿ ಐಟಿಐ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪಾಂಡವಪುರ ಶಾಸಕ ಸಿ.ಎಸ್.ಪುಟ್ಟರಾಜು, ವಿಧಾನಪರಿತ್ ಶಾಸಕ ಕೆ.ಟಿ ಶ್ರೀಕಂಠೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ,  ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ , ತಹಶೀಲ್ದಾರ್ ಪ್ರಮೋದ್ ಪಾಟೀಲ್ ಹಾಗೂ...

Know More

ನಾಪತ್ತೆಯಾದ ಪತಿಗಾಗಿ ಪತ್ನಿ ಹುಡುಕಾಟ

03-Sep-2021 ಮಂಡ್ಯ

ಪಾಂಡವಪುರ: ಮದ್ಯ ವ್ಯಸನಿಯಾಗಿದ್ದ ಪತಿ ಮನೆಯಿಂದ ಹೊರಗೆ ಹೋದವರು ಮರಳಿ ಬಂದಿಲ್ಲ ಎಂದು ಪತ್ನಿ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ. ಗುಮ್ಮನಹಳ್ಳಿ ಗ್ರಾಮದ ನಿವಾಸಿ ಶಿವಾನಂದ ಎಂಬಾತನೇ ನಾಪತ್ತೆಯಾದವನು. ಈತ ಆ.28ರಂದು ತನ್ನ ಮನೆಯಿಂದ ಹೊರ ಹೋದವನು ಮರಳಿ ಬಂದಿಲ್ಲ ಎನ್ನಲಾಗಿದ್ದು, ಈ ಸಂಬಂಧ ಪತಿಗಾಗಿ ಹುಡುಕಾಟ ನಡೆಸಿದ ಪತ್ನಿ ಪ್ರೇಮ ಅವರು ಎಲ್ಲಿಯೂ ಪತ್ತೆಯಾಗದ ಹಿನ್ನಲೆಯಲ್ಲಿ ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನೀಡಿದ ದೂರಿನಲ್ಲಿ ನನ್ನ ಪತಿ ಮದ್ಯವ್ಯಸನಿಯಾಗಿದ್ದು, ಯಾವ ಕೆಲಸವೂ ಮಾಡದೆ ಊರಿನಲ್ಲಿ ಅಲೆದಾಡುತ್ತಾ ವೃಥಾ ಕಾಲ ಕಳೆಯುತ್ತಾ ಮನೆಯಲ್ಲೇ ಇರುತ್ತಿದ್ದರು. ನಾನು ಮೈಸೂರಿನಲ್ಲಿ ಲೂನಾರ್‍ಸ್ ಕಂಪೆನಿಯಲ್ಲಿ ಕೂಲಿ ಮಾಡಿಕೊಂಡಿದ್ದು, ಆ.28ರಂದು ಬೆಳಗ್ಗೆ ಸುಮಾರು 7.15ರ ಸಮಯದಲ್ಲಿ ಎಂದಿನಂತೆ ನಾನು ಕೂಲಿ ಕೆಲಸಕ್ಕಾಗಿ ಮೈಸೂರಿಗೆ ಹೋಗುವಾಗ ಮನೆಯಲ್ಲೇ ಇದ್ದ ಪತಿ ಸಂಜೆ ಸುಮಾರು 7ಗಂಟೆಗೆ ಮೈಸೂರಿನಿಂದ ನಾನು ಮನೆಗೆ ಬಂದ ವೇಳೆ ಮನೆಯಲ್ಲಿ ಕಾಣಲಿಲ್ಲ. ಬಳಿಕ ರಾತ್ರಿಯಾದರೂ ಮನೆಗೆ ಬಾರದ ಕಾರಣ ಅತ್ತೆ ಪುಟ್ಟಮ್ಮ ಮತ್ತು ಮೈದ ರಾಜೇಶ್ ಅವರಿಗೆ ತಿಳಿಸಿದ ನಂತರ ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಮನೆಯಿಂದ ಕಾಣೆಯಾದ ವೇಳೆ ತಿಳಿ ನೀಲಿ ಬಣ್ಣದ ಅರ್ಧ ತೋಳಿನ ಶರ್ಟ್, ಕಾಫಿ ಕಲರ್ ಚಡ್ಡಿ, ಹಸಿರು ಬಣ್ಣದ ಟವೆಲ್ ಹಾಕಿರುತ್ತಾರೆ. ನನ್ನ ಪತಿಯನ್ನು ಪತ್ತೆ ಮಾಡಿಕೊಡಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪ್ರೇಮ ಮನವಿ ಮಾಡಿದ್ದಾರೆ....

Know More

ಎರಡು ವರ್ಷದ ಬಳಿಕ ಮಹಿಳೆಯ ಕೊಂದ ಹಂತಕನ ಬಂಧನ

12-Aug-2021 ಮೈಸೂರು

ಪಾಂಡವಪುರ: ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ನಡೆದಿದ್ದು, ವಿವಾಹಿತ ಮಹಿಳೆಯನ್ನು ನದಿಗೆ ತಳ್ಳಿ ಕೊಲೆ ಮಾಡಿರುವ ಆರೋಪಿಯನ್ನು ಎರಡು ವರ್ಷದ ಬಳಿಕ ಪಾಂಡವಪುರ ಪೊಲೀಸರು ಬಂಧಿಸಿ ಆತನನ್ನು ಜೈಲಿಗಟ್ಟಿದ್ದಾರೆ. ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು