ಬೆಂಗಳೂರು: ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟೊಯೊಟಾ ಇಂಡಿಯಾ ಕಂಪನಿಯು 3ನೇ ಕಾರು ಉತ್ಪದನಾ ಘಟಕ ತೆರೆಯುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.
ಬೆಂಗಳೂರು ಹೊರವಲಯದ ಬಿಡದಿಯಲ್ಲಿ ಈಗಾಗಲೇ ಎರಡು ಕಾರು ಉತ್ಪಾದನಾ ಘಟಕಗಳನ್ನು ಹೊಂದಿರುವ ಟೊಯೊಟಾ ಕಂಪನಿಯು ಮೂರನೇ ಘಟಕವನ್ನು ಸಹ ಬಿಡದಿ ಸನೀಹದಲ್ಲಿ ತೆರೆಯಲು ನಿರ್ಧರಿಸಿದೆ. ಹೊಸ ಘಟಕ ಸ್ಥಾಪನೆಗಾಗಿ ರೂ. 3,300 ಕೋಟಿ ಬಂಡವಾಳ ಹೂಡಿಕೆಗೆ ಸಿದ್ದವಾಗಿದ್ದು, ಇದರಿಂದ ಬರೋಬ್ಬರಿ 2 ಸಾವಿರ ಜನರಿಗೆ ಉದ್ಯೋಗ ಸೃಷ್ಠಿಯಾಗಲಿದೆ.
ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟ ಆರಂಭಿಸಿ 25 ವರ್ಷ ಪೂರೈಸಿರುವ ಟೊಯೊಟಾ ಕಂಪನಿಯು ಹಲವಾರು ಮಾರಾಟ ದಾಖಲೆಗಳನ್ನು ಸಾಧಿಸಿದ್ದು, ಇದೀಗ ಹೊಸ ಕಾರು ಉತ್ಪಾದನಾ ಘಟಕದ ಮೂಲಕ ವಾರ್ಷಿಕವಾಗಿ 4 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುವ ಗುರಿಹೊಂದಿದೆ.
ಇದಲ್ಲದೆ ಭಾರತದಲ್ಲಿ ಟೊಯೊಟಾ ಕಂಪನಿಯು ಮುಂಬರುವ ದಿನಗಳಲ್ಲಿ ಕರೊಲ್ಲಾ ಕ್ರಾಸ್ ಎಸ್ ಯುವಿ ಸೇರಿದಂತೆ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಇವು ಹಲವಾರು ವಿಶೇಷತೆಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.