ತಿರುವನಂತಪುರಂ: ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಅವರ 63 ನೇ ಹುಟ್ಟುಹಬ್ಬದಂದು ಭಾನುವಾರ 72 ಲಕ್ಷ ರೂಪಾಯಿ ವೆಚ್ಚದ ಕಿಯಾ ಇವಿ 6 ಅನ್ನು ಉದ್ಯಮಿ ಅಲೆಕ್ಸ್ ಕೆ. ವರ್ಗೀಸ್ ಅವರು ಗಿಫ್ಟ್ ಮಾಡಿದ್ದಾರೆ. ಮೋಹನ್ ಲಾಲ್ ಹೆಡ್ಜ್ ಇಕ್ವಿಟೀಸ್ನ ಸ್ಟಾಕ್ ಬ್ರೋಕಿಂಗ್ ಸಂಸ್ಥೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಮೋಹನ್ ಲಾಲ್ ಅವರು ತಮ್ಮ ಪತ್ನಿ ಸುಚಿತ್ರಾ ಅವರೊಂದಿಗೆ ಕೊಚ್ಚಿಯ ನಿವಾಸದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಆಪ್ತ ಸ್ನೇಹಿತ ಮತ್ತು ಕೇರಳದ ಮಾಜಿ ಸಚಿವ ಶಿಬು ಬೇಬಿ ಜಾನ್ ಮತ್ತು ನಟ-ನಿರ್ದೇಶಕ ಮೇಜರ್ ರವಿ ಸಂಭ್ರಮಾಚರಣೆಯಲ್ಲಿ ಹಾಜರಿದ್ದರು. ಮಲಯಾಳಂ ಉದ್ಯಮದ ಬಹುಮುಖ ನಟರಲ್ಲಿ ಒಬ್ಬರಾದ ಮೋಹನ್ಲಾಲ್ ತಮ್ಮ 18 ನೇ ವಯಸ್ಸಿನಲ್ಲಿ “ತಿರನೋಟ್ಟಂ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.