News Kannada
Saturday, February 24 2024
ವಿದೇಶ

ಕಂದಕಕ್ಕೆ ಉರುಳಿದ ಬಸ್: 7 ಜನರ ದುರ್ಮರಣ

Photo Credit :

ಕಂದಕಕ್ಕೆ ಉರುಳಿದ ಬಸ್: 7 ಜನರ ದುರ್ಮರಣ

ಶಿಮ್ಲಾ: ಟಿಕ್ಕಾರ್ ಎಂಬಲ್ಲಿಂದ ಶಿಮ್ಲಾ ಕಡೆಗೆ ಬರುತ್ತಿದ್ದ ಬಸ್ ಒಂದು ಚೈಲಾ ಎಂಬಲ್ಲಿ ಕಣಿವೆಗೆ ಉರುಳಿದ ಪರಿಣಾಮ 7 ಮಂದಿ ಮೃತಪಟ್ಟಿದ್ದು, 26 ಮಂದಿಗೆ ಗಾಯಗಳಾಗಿವೆ. ಬಸ್ ನಲ್ಲಿ ಸುಮಾರು 33 ಪ್ರಯಾಣಿಕರಿದ್ದು, ಅಪಘಾತದ ವೇಳೆ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶುಕ್ರವಾರ ಬೆಳಗ್ಗೆ ಈ ಘೋರ ಅನಾಹುತ ಸಂಭವಿಸಿದ್ದು, ಶಿಮ್ಲಾದಿಂದ 42 ಕಿ.ಮೀ. ದೂರದಲ್ಲಿರುವ ತೋಘ್-ಹಟ್ಕೊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಇದನ್ನು ನೋಡಿದ ಕಾರು ಚಾಲಕರೊಬ್ಬರು ತೋಘ್ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.

ಗಾಯಾಳುಗಳನ್ನು ತೋಘ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಗಾಯಗೊಂಡವರನ್ನು ಇಂದಿರಾ ಗಾಂಧಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿಗೀಡಾದವರ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
189

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು