ನವದೆಹಲಿ : ದೇಶದಲ್ಲಿ ಕೊರೋನಾದ ಮಹಾ ಸ್ಫೋಟ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 53,480 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಹಾಗೂ 354 ಮಂದಿ ಮೃತಪಟ್ಟಿದ್ದಾರೆ .
ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,21,49,335 ಕ್ಕೆ ತಲುಪಿದೆ. ಅಂತೆಯೇ ಕೊರೋನಾದಿಂದ 1,62,468 ಮಂದಿಯ ಪ್ರಾಣ ಕಳೆದುಕೊಂಡಿದ್ದಾರೆ.
ಕೊರೋನಾ ಸೋಂಕಿತರಾಗಿದ್ದ 1,14,34,301 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ . ದೇಶದ ಈಗ ವಿವಿಧ ಆಸ್ಪತ್ರೆಗಳಲ್ಲಿ 5,52,566 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಇದುವರೆಗೆ 6,30,54,353 ಮಂದಿಗೆ ಕೊರೋನಾ ತಡೆ ಲಸಿಕೆ ನೀಡಲಾಗಿದೆ .