
ಶ್ರೀನಗರ: ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದು ಹಾಕಿದ ಬಳಿಕ ಮೊದಲ ಸಲ ಸಂಪೂರ್ಣ ಮಟ್ಟದಲ್ಲಿ ಸ್ಥಿರ ದೂರವಾಣಿ ವ್ಯವಸ್ಥೆಯನ್ನು ಪುನರಾರಂಭಗೊಳಿಸಿದೆ.
ಕುಪ್ವಾರ, ಹಂದ್ವಾರ ಮೊದಲಾದ ಜಿಲ್ಲೆಗಳಲ್ಲಿ ಸ್ಥಿರ ದೂರವಾಣಿ ಪುನರಾರಂಭಿಸಲಾಗಿದೆ.
ಗುರುವಾರ ರಾತ್ರಿ ತನಕ ಮೊಬೈಲ್ ನಲ್ಲಿ ಒಳಬರುವ ಹಾಗೂ ಹೊರ ಹೋಗುವ ಕರೆಗಳನ್ನು ಪುನರಾರಂಭಿಸಲಾಗುವುದು ಎಂದು ಮೂಲಗಳೂ ಹೇಳಿದೆ.
ಕಾಶ್ಮೀರದಲ್ಲಿನ ಹೆಚ್ಚಿನ ಎಲ್ಲಾ ದೂರವಾಣಿ ಎಕ್ಸೇಂಜ್ ಗಳನ್ನು ಪುನರಾರಂಭ ಮಾಡಲಾಗಿದೆ. 19ಕ್ಕೂ ಹೆಚ್ಚು ದೂರವಾಣಿ ಎಕ್ಸೇಂಜ್ ಗಳು ಪುನರಾರಂಭಗೊಂಡಿದೆ ಎಂದು ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಾಹಿದ್ ಚೌಧರಿ ತಿಳಿಸಿದರು.