ನವದೆಹಲಿ: ಜಾಗತಿಕ ಹೆಮ್ಮಾರಿ ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಈ ಹಿಂದೆಯ ಶ್ಲಾಘನೆ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೀಗ ಭಾರತದಲ್ಲಿ ಒಂದೇ ದಿನ 1 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಹೊಸ ದಾಖಲೆ ಬರೆದ ಮೋದಿ ಸರ್ಕಾರಕ್ಕೆ ಬಿಲ್ ಗೇಟ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಂದೇ ದಿನಕ್ಕೆ ಒಂದು ಕೋಟಿ ಡೋಸ್ ಲಸಿಕೆ ನೀಡಿ ಮಹತ್ವದ ಮೈಲುಗಲ್ಲು ಸಾಧಿಸಿದ ಭಾರತಕ್ಕೆ ಅಭಿನಂದನೆಗಳು. ಈ ಸಾಧನೆಗೆ ಕೇಂದ್ರ ಸರ್ಕಾರ, ವ್ಯಾಕ್ಸೀನ್ ಉತ್ಪಾದಕರು ಸೇರಿದಂತೆ ಹತ್ತಾರು ಲಕ್ಷ ಆರೋಗ್ಯ ಸಿಬ್ಬಂದಿ ಪರಿಶ್ರಮ ಕಾರಣ ಎಂದು ಶ್ಲಾಘಿಸಿ ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.