News Karnataka Kannada
Wednesday, April 24 2024
Cricket
ವಿದೇಶ

ಕೊರೋನ ಅಪ್ಡೇಟ್; ಮುಂಬೈನಲ್ಲಿ ಮತ್ತೆ ಹೆಚ್ಚಿದ ಕೊರೋನ ಅಟ್ಟಹಾಸ

Photo Credit :

ಕೊರೋನ ಅಪ್ಡೇಟ್; ಮುಂಬೈನಲ್ಲಿ ಮತ್ತೆ ಹೆಚ್ಚಿದ ಕೊರೋನ ಅಟ್ಟಹಾಸ

ಮುಂಬೈ: ದಿನೇದಿನೇ ಭಾರತದಲ್ಲಿ ಕೊರೋನ ಹಾವಳಿ ಹೆಚ್ಚುತ್ತಲೇ ಇದ್ದು,ಕೋವಿಡ್ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಅಬ್ಬರ ಮುಂದುವರೆದಿದೆ. 24ಗಂಟೆಯಲ್ಲಿ ಮತ್ತೆ ಹೊಸ ಸೋಂಕಿತರ ಸಂಖ್ಯೆ 8 ಸಾವಿರ ಗಡಿ ದಾಟಿದೆ.

ಮಹಾರಾಷ್ಟ್ರ ಒಂದರಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 8,623 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ಮಹಾರಾಷ್ಟ್ರದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 21,46,777ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 51 ಮಂದಿ ಪ್ರಾಣವನ್ನು ಈ ಸೋಂಕು ಬಲಿತೆಗೆದುಕೊಂಡಿದ್ದು, ಆ ಮೂಲಕ ಈ ವರೆಗೂ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ 52,092ಕ್ಕೆ ಏರಿಕೆಯಾಗಿದೆ.

ಇನ್ನು ಈ ಸೋಂಕಿನಿಂದ ಗುಣಮುಖರಾದ ಸಂಖ್ಯೆ 3,648ಕ್ಕೆ ತಲುಪಿದ್ದು, ಇವರಿಗೆ ಸೋಂಕಿನಿಂದ ಮುಕ್ತರಾದರೆ ಸಂಖ್ಯೆ 20,20,951ಕ್ಕೆ ಏರಿಕೆಯಾಗಿದೆ. ಪ್ರಸ್ತುತ 72,530 ಸಕ್ರಿಯ ಪ್ರಕರಣಗಳಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇನ್ನೊಂದೆಡೆ, ಮುಂಬೈನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 987 ಸೋಂಕು ಪ್ರಕರಣಗಳು ವರದಿಯಾಗಿದೆ. ಆ ಮೂಲಕ ಮುಂಬೈನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 324864ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಇಂದು 801 ಮಂದಿ ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದು, ಆ ಮೂಲಕ ಒಟ್ಟಾರೆ ಗುಣಮುಖರ ಸಂಖ್ಯೆ 303033ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಇಂದು ಸೋಂಕಿನಿಂದಾಗಿ 4 ಮಂದಿ ಬಲಿಯಾಗಿದ್ದು, ಈ ವರೆಗೂ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ 11,465ಕ್ಕೆ ಏರಿಕೆಯಾಗಿದೆ. ಪ್ರಸ್ತುತ 9496 ಸಕ್ರಿಯ ಪ್ರಕರಣಗಳಿವೆ ಎಂದು ಬಿಎಂಸಿ ಮಾಹಿತಿ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು