ಬೀದರ್: ಇಲ್ಲಿ 3ನೇ ಬಾರಿ ಲಘು ಭೂಕಂಪ ಉಂಟಾಗಿದ್ದು, ಜನರು ಚಳಿಯನ್ನು ಲೆಕ್ಕಿಸದೆ ರಾತ್ರಿ ಪೂರ್ತಿ ಜಾಗರಣೆ ಮಾಡಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಶಮ್ತಾಬಾದ್ನಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ರಾತ್ರಿ ಸುಮಾರು 2 ಗಂಟೆಯಿಂದ 9 ಬಾರಿ ಭೂ ಕಂಪನವಾಗಿದ ಅನುಭವ ಜನರಲ್ಲಿ ಉಂಟಾಗಿದೆ. ಇದರಿಂದ ಗ್ರಾಮಸ್ಥರು ಹೆದರಿದ್ದು ರಾತ್ರಿ ಪೂರ್ತಿ ಎಲ್ಲರು ಒಂದು ಕಡೆ ಸೇರಿ ಬೆಂಕಿ ಹಾಕಿ ಕಾಯಿಸಿಕೊಂಡು ಭಯದಲ್ಲಿ ಕಾಲಕಳೆದಿದ್ದಾರೆ.