ನವದೆಹಲಿ: ಎರಡು ಮಿನಿ ಬಸ್ ಗಳು ಡಿಕ್ಕಿ ಹೊಡೆದ ಪರಿಣಾಮ ಮಗು ಹಾಗೂ ನಾಲ್ವರು ಮಹಿಳೆಯರು ಸೇರಿ 11ಮಂದಿ ಸಾವನ್ನಪ್ಪಿ, 9ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ನಾಗ್ಫುರ್ ನಲ್ಲಿ ಶನಿವಾರ ನಡೆದಿದೆ.
ಈ ಅವಘಡ ಇಂದು ಮುಂಜಾನೆ 3 ಗಂಟೆಗೆ ಸುಮಾರಿಗೆ ನಡೆದಿದೆ. ಬಸ್ ನಲ್ಲಿದ್ದವರು ಮಹಾರಾಷ್ಟ್ರ ಹಾಗೂ ಶೋಲಾಫುರ್ ನವರಾಗಿದ್ದು ಅವರೆಲ್ಲರು ತಮ್ಮ ಆಧ್ಯಾತ್ಮಿಕ ಗುರುವನ್ನು ಭೇಟಿಯಾಗಲು ತೆರಳುತ್ತಿದ್ದರು.
ಹನುಮನ್ ಗಂದ್ ಹೆದ್ದಾರಿಯಲ್ಲಿ ದಾಡುತ್ತಿದ್ದ ಕೋಣಕ್ಕೆ ಆಗುವ ಅಪಘಾತವನ್ನು ತಡೆಯಲು ಹೋದ ಚಾಲಕ ನಿಯಂತ್ರಣ ಕಳೆದುಕೊಂಡು ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಹಿಂದಿನಿಂದ ಬರುತ್ತಿದ್ದ ಬಸ್ ಈ ವೇಳೆ ನಿಯಂತ್ರಣ ಕಳೆದುಕೊಂಡು ಬಸ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 9ಮಂದಿ ಗಾಯಗೊಂಡಿದ್ದು ಅವರಲ್ಲಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ. ಅವರೆಲ್ಲರನ್ನೂ ಜೈಪುರ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರನ್ನು ಕಚುಮಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.