ನವದೆಹಲಿ: ಕರ್ನಾಟಕ ವಿಧಾನ ಸಭೆ ಚುನಾವಣೆ ಮತದಾನವು ಮೇ 15ರಂದು ಒಂದೇ ಹಂತದಲ್ಲಿ ನಡೆಯಲಿದೆ ಚುನಾವಣೆ ಆಯುಕ್ತ ಓಪಿ ರಾವತ್ ದೆಹಲಿಯಲ್ಲಿ ಚುನಾವಣೆಯ ಆಯೋಗ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೇ 28ರಂದು ಹಾಲಿ ವಿಧಾನಸಭೆ ಅವಧಿ ಅಂತ್ಯವಾಗಲಿದ್ದು , ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಅವರು ಹೇಳಿದರು.
ಒಟ್ಟು ಕರ್ನಾಟಕ ರಾಜ್ಯದಲ್ಲಿ 4.96 ಕೋಟಿ ಮತದಾರರು ಇದ್ದು ಅದರಲ್ಲಿ 2.51 ಕೋಟಿ ಪುರುಷರು ಹಾಗೂ 2.44 ಕೋಟಿ ಮಹಿಳಾ ಮತದಾರರು ಇದ್ದಾರೆ ಎಂದು ಹೇಳಿದರು. ಚುನಾವಣಾ ಪ್ರಚಾರಕ್ಕಾಗಿ ಕೇವಲ 28ಲಕ್ಷ ರೂ ಮಾತ್ರ ಬಳಸಬಹುದು ಎಂದು ಅವರು ಸ್ಪಷ್ಟಪಡಿಸಿದರು.
2018ರ ಎ.17ರಂದು ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳುತ್ತದೆ.
ಎಪ್ರಿಲ್ 24ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ.
ಎಪ್ರಿಲ್ 25ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ಎಪ್ರಿಲ್ 27ರಂದು ನಾಮಪತ್ರ ಹಿಂತೆಗೆತಕ್ಕೆ ಕೊನೇ ದಿನ.
ಮೇ 12ರಂದು ಮತದಾನ
ಮೇ 15ರಂದು ಫಲಿತಾಂಶ