ನವದೆಹಲಿ: ಐಸಿಐಸಿಐ ಬ್ಯಾಂಕ್ ನ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಚಂದಾ ಕೊಚ್ಚರ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ಬ್ಯಾಂಕ್ ನ ಮೂಲಗಳು ಹೇಳಿವೆ.
ಕೊಚ್ಚರ್ ಅವರ ಬದಲಿಗೆ ಸಂದೀಪ್ ಭಕ್ಷಿ ಅವರನ್ನು ಆಡಳಿತ ನಿರ್ದೇಶಕ ಹಾಗೂ ಸಿಇಒ ಆಗಿ ನೇಮಿಸಲಾಗಿದೆ ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ.
ಭಕ್ಷಿ ಅವರನ್ನು ರೆಗ್ಯೂಲೇಟರಿ ಮತ್ತು ಇತರ ಕೆಲವು ಅನುಮತಿಯೊಂದಿಗೆ ನೇಮಕ ಮಾಡಲಾಗಿದೆ. ಭಕ್ಷಿ ಅವರು ಈ ಹಿಂದೆ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಒಒ ಆಗಿದ್ದರು ಎಂದು ಬ್ಯಾಂಕ್ ಹೇಳಿದೆ.
ವೀಡಿಯೋಕಾನ್ ಕಂಪೆನಿಗೆ ಸಾಲ ನೀಡಿರುವುದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪವು ಕೊಚ್ಚರ್ ಅವರ ಮೇಲಿತ್ತು.