ಗುಂಡಿನ ಚಕಮಕಿ: ಇಬ್ಬರು ಉಗ್ರರನ್ನು ಸದೆ ಬಡಿದ ಭದ್ರತಾ ಪಡೆ

ಗುಂಡಿನ ಚಕಮಕಿ: ಇಬ್ಬರು ಉಗ್ರರನ್ನು ಸದೆ ಬಡಿದ ಭದ್ರತಾ ಪಡೆ

YK   ¦    Feb 22, 2020 11:23:47 AM (IST)
ಗುಂಡಿನ ಚಕಮಕಿ: ಇಬ್ಬರು ಉಗ್ರರನ್ನು ಸದೆ ಬಡಿದ ಭದ್ರತಾ ಪಡೆ

ಶ್ರೀನಗರ: ಜಮ್ಮು- ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸಂಗಮ್ ಎಂಬಲ್ಲಿ ಭದ್ರತಾ ಪಡೆ ಹಾಗೂ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸದೆ ಬಡಿಯಲಾಗಿದೆ.

ಮೃತ ಉಗ್ರರು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಸದಸ್ಯರು ಎಂದು ಗುರುತಿಸಲಾಗಿದೆ.

ಶುಕ್ರವಾರ ತಡರಾತ್ರಿಂದಲೇ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ಆರಂಭಗೊಂಡಿತ್ತು. ಕಾರ್ಯಾಚರಣೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ , ಜಮ್ಮು- ಕಾಶ್ಮೀರ ಪೊಲೀಸ್ ಮತ್ತು ಯೋಧರು ಪಾಲ್ಗೊಂಡಿದ್ದರು.