ಗೋದ್ರಾ ರೈಲು ಹತ್ಯಾಕಾಂಡದ ಪ್ರಧಾನ ರೂವಾರಿಯ ಬಂಧನ

ಗೋದ್ರಾ ರೈಲು ಹತ್ಯಾಕಾಂಡದ ಪ್ರಧಾನ ರೂವಾರಿಯ ಬಂಧನ

May 18, 2016 04:04:12 PM (IST)

ಅಹ್ಮದಾಬಾದ್: 2002ರ ಗೋದ್ರಾ ರೈಲು ಹತ್ಯಾಕಾಂಡದ ಪ್ರಧಾನ ರೂವಾರಿ ಫರೂಖ್ ಭಾನಾ ಅವರನ್ನು ಬಂಧಿಸುವಲ್ಲಿ ಗುಜರಾತ್ ಉಗ್ರ ನಿಗ್ರಹ ದಳ (ಎಟಿಎಸ್) ಬುಧವಾರ ಯಶಸ್ವಿಯಾಗಿದೆ.

2002ರ ಫೆ. 27ರಂದು ಗೋದ್ರಾ ಬಳಿ ಸಬರ್‌ಮತಿ ಎಕ್ಸ್‌ಪ್ರೆಸ್ ರೈಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ರೈಲಿನಲ್ಲಿದ್ದ 59 ಕರಸೇವಕರು ಜೀವಂತ ದಹನವಾಗಿದ್ದರು.  ಗೋಧ್ರಾ ರೈಲು ದಾಳಿಯ ನಂತರ ಗುಜರಾತ್‌ನಲ್ಲಿ  ಸಂಭವಿಸಿದ ಕೋಮುಗಲಭೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಹತ್ಯೆಗೀಡಾಗಿದ್ದರು. ಬಂಧಿತ ಭಾನಾ ನಗರಸಭಾ ಮಾಜಿ ಸದಸ್ಯನಾಗಿದ್ದನು ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವರ್ಷ ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಕಸಂ ಇಬ್ರಾಹಿಂ ಭಾಮೆಡಿ ಎಂಬಾತನನ್ನು ಬಂಧಿಸಲಾಗಿತ್ತು.