ಒಂದೇ ದಿನದಲ್ಲಿ 5611 ಕೊರೋನಾ ಪ್ರಕರಣ ಪತ್ತೆ

ಒಂದೇ ದಿನದಲ್ಲಿ 5611 ಕೊರೋನಾ ಪ್ರಕರಣ ಪತ್ತೆ

HSA   ¦    May 20, 2020 01:14:54 PM (IST)
ಒಂದೇ ದಿನದಲ್ಲಿ 5611 ಕೊರೋನಾ ಪ್ರಕರಣ ಪತ್ತೆ

ನವದೆಹಲಿ: ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಕೊರೋನಾ ಮಹಾಮಾರಿಯು ಆವರಿಸಿದ್ದು, ಒಟ್ಟು 5611 ಪ್ರಕರಣಗಳು ಪತ್ತೆಯಾಗಿದೆ.

ಬುಧವಾರದ ಬೆಳಗ್ಗಿನ ತನಕ ಕೊರೋನಾದ ಒಟ್ಟು 106,750 ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 140 ಮಂದಿ ಮೃತಪಟ್ಟಿದ್ದು, ಇದುವರೆಗೆ ಒಟ್ಟು3303 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.

61149 ಪ್ರಕರಣಗಳು ಸಕ್ರಿಯವಾಗಿದೆ ಮತ್ತು 42298 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ತಿಳಿಸಿದೆ.