ಹುಲಿ ದತ್ತು ಪಡೆದ ಹುಬ್ಬಳಿ ಟೈಗರ್ಸ್ ತಂಡ

ಹುಲಿ ದತ್ತು ಪಡೆದ ಹುಬ್ಬಳಿ ಟೈಗರ್ಸ್ ತಂಡ

Sep 07, 2017 03:07:20 PM (IST)
ಹುಲಿ ದತ್ತು ಪಡೆದ ಹುಬ್ಬಳಿ ಟೈಗರ್ಸ್ ತಂಡ

ಮೈಸೂರು: ಮೈಸೂರು ಮೃಗಾಲಯಕ್ಕೆ ಕೆಪಿಎಲ್ ನ ಹುಬ್ಬಳ್ಳಿ ಟೈಗರ್ಸ್ ತಂಡ ಆಟಗಾರರು ಭೇಟಿ ನೀಡಿ ಒಂದು ವರ್ಷದ ಅವಧಿಗೆ ಒಂದು ಲಕ್ಷ ನೀಡಿ ಹುಲಿಯನ್ನು ದತ್ತು ಸ್ವೀಕರವನ್ನು ನವೀಕರಣ ಮಾಡಿದರು.

ನಿನ್ನೆ ನಡೆದ ಕೆಪಿಎಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡದ ವಿರುದ್ಧ  ಹುಬ್ಬಳ್ಳಿ ಟೈಗರ್ಸ್ ಗೆಲುವು ಸಾಧಿಸಿದ್ದು, ಇದೇ ಖುಷಿಯಲ್ಲಿ ತಂಡದ ಎಲ್ಲಾ ಆಟಗಾರರು ಇಂದು ಮೈಸೂರು ಮೃಗಾಲಯಕ್ಕೆ ಭೇಟಿ ಒಂದು ವರ್ಷದ ಅವಧಿಗೆ ಒಂದು ಲಕ್ಷ ಹಣ ನೀಡಿ ಹುಲಿಯನ್ನ ದತ್ತು ಸ್ವೀಕರಿಸಿದೆ.

ಹುಬ್ಬಳ್ಳಿ ಟೈಗರ್ಸ್ ತಂಡ ಕಳೆದ ಮೂರು ವರ್ಷದಿಂದ ಮೈಸೂರು ಮೃಗಾಲಯದಲ್ಲಿ ಒಂದು ಹುಲಿಯನ್ನು ದತ್ತು ಪಡೆಯುತ್ತಿದ್ದು, ಇದರ ವೆಚ್ಚಕ್ಕಾಗಿ ವರ್ಷಕ್ಕೆ ಒಂದು ಲಕ್ಷ ಹಣ ನೀಡುತ್ತಿದೆ. ಕೆಪಿಎಲ್ ನಲ್ಲಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಬಾರಿಯೂ ತಂಡ ಪ್ರಾಣಿಯನ್ನು ದತ್ತು ಸ್ವೀಕಾರ ಮಾಡಿದೆ. ತಂಡದಲ್ಲಿರುವ ಇನ್ನೂ ಕೆಲವು ಆಟಗಾರರು ಪ್ರಾಣಿಗಳನ್ನು ದತ್ತು ಸ್ವೀಕರಿಸುವುದಾಗಿ ತಿಳಿಸಿದ್ದಾರೆ ಎನ್ನುತ್ತಾರೆ ತಂಡದ ನಾಯಕ ವಿನಯ್ ಕುಮಾರ್.

ಇದೇ ಸಂದರ್ಭದಲ್ಲಿ ಮಾತನಾಡಿದ ತಂಡದ ನಾಯಕ ವಿನಯ್ ಕುಮಾರ್, ಪ್ರಾಣಿ-ಪಕ್ಷಿಗಳನ್ನು ಪ್ರತಿಯೊಬ್ಬರೂ ಸಂರಕ್ಷಿಸಬೇಕು. ಪ್ರಾಣಿ-ಪಕ್ಷಿಗಳ ಉಳಿವಿಗಾಗಿ ಶ್ರಮಿಸಬೇಕು. ತಂಡದಿಂದ ಹುಲಿ ದತ್ತು ಪಡೆದಿರೋದು ಸಂತಸ ತಂದಿದೆ. ತಂಡ ಹೊರತು ಪಡಿಸಿ ನಾನು ಮುಂದೆ ಕೆಲ ಪ್ರಾಣಿಗಳನ್ನ ದತ್ತು ಪಡೆಯುತ್ತೇನೆ ಎಂದರು. ಇನ್ನೂ ತಂಡದ ಎಲ್ಲಾ ಆಟಗಾರರು ಫುಲ್ ಜಾಲಿ ಮೂಡನಲ್ಲಿದ್ದು ಮೃಗಾಲಯವನ್ನ ಒಂದು ಸುತ್ತು ಹಾಕಿ ಪ್ರಾಣಿಗಳನ್ನು ಹತ್ತಿರದಿಂದ ನೋಡಿ  ಸಂತಸಪಟ್ಟರು.