ರಾಹುಲ್ ಗಾಂಧಿ ಪಟ್ಟಾಭಿಷೇಕ ಮತ್ತೆ ಮುಂದೂಡಿಕೆ

ರಾಹುಲ್ ಗಾಂಧಿ ಪಟ್ಟಾಭಿಷೇಕ ಮತ್ತೆ ಮುಂದೂಡಿಕೆ

Nov 14, 2017 04:51:08 PM (IST)
ರಾಹುಲ್ ಗಾಂಧಿ ಪಟ್ಟಾಭಿಷೇಕ ಮತ್ತೆ ಮುಂದೂಡಿಕೆ

ನವದೆಹಲಿ: ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ನಿರ್ಧಾರಕ್ಕೆ ಸದ್ಯಕ್ಕೆ ತಡೆ ಹೇರಲಾಗಿದ್ದು, ಚುನಾವಣೆ ಬಳಿಕ ರಾಹುಲ್ ಪಟ್ಟಾಭಿಷೇಕವಾಗುವ ಸಾಧ್ಯತೆಯಿದೆ.

ಕಾಂಗ್ರೆಸ್ ಮೂಲಗಳು ಹೇಳಿರುವ ಪ್ರಕಾರ ಗುಜರಾತ್ ಚುನಾವಣೆ ಮೊದಲು ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಪಕ್ಷದಲ್ಲಿನ ಕೆಲವು ನಾಯಕರಿಗೆ ಒಪ್ಪಿಗೆಯಿಲ್ಲ. ಈ ಕಾರಣ ಪಕ್ಷದಲ್ಲಿ ಬಂಡಾಯವಾಗಬಹುದೆಂಬ ಭೀತಿಯಿಂದ ಪಟ್ಟಾಭಿಷೇಕ ಮುಂದೂಡಲಾಗಿದೆ ಮತ್ತು ಸೋನಿಯಾ ಗಾಂಧಿ ನೇತೃತ್ವದಲ್ಲೇ ಚುನಾವಣೆ ಎದುರಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಸಮೀಕ್ಷೆಗಳು ಹೇಳಿರುವ ಕಾರಣದಿಂದ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯನ್ನು ಅಧ್ಯಕ್ಷರನ್ನಾಗಿ ಮಾಡದಿರಲು ನಿರ್ಧರಿಸಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಬಳಿಕ ರಾಹುಲ್ ಅಧ್ಯಕ್ಷ ಗಾದಿಗೇರಬಹುದು.