ಸಂಸತ್ತಿನಲ್ಲೂ ಕಾಸ್ಟಿಂಗ್ ಕೌಚ್: ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹೊಸ ಬಾಂಬ್!

ಸಂಸತ್ತಿನಲ್ಲೂ ಕಾಸ್ಟಿಂಗ್ ಕೌಚ್: ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹೊಸ ಬಾಂಬ್!

HSA   ¦    Apr 24, 2018 03:58:46 PM (IST)
ಸಂಸತ್ತಿನಲ್ಲೂ ಕಾಸ್ಟಿಂಗ್ ಕೌಚ್: ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹೊಸ ಬಾಂಬ್!

ನವದೆಹಲಿ: ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಇತ್ತೀಚೆಗೆ ನಟಿ ಶ್ರೀ ರೆಡ್ಡಿ ಎಂಬಾಕೆ ಅರೆನಗ್ನ ಪ್ರತಿಭಟನೆ ನಡೆಸಿದ್ದು ಭಾರೀ ಸುದ್ದಿಯಾಗಿತ್ತು. ಅದೇ ಈಗ ಸಂಸತ್ತಿನಲ್ಲಿ ಕೂಡ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹೇಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾ ಚೌಧರಿ ಅವರು, ಕಾಸ್ಟಿಂಗ್ ಕೌಚ್ ಎನ್ನುವುದು ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಸಂಸತ್ತಿನಲ್ಲೂ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವುದು ಜೀವನ ಸಾಗಿಸುವ ವಿಧಾನ ಎಂದು ಕೋರಿಯೋಗ್ರಾಫರ್ ಸರೋಜ್ ಖಾನ್ ಹೇಳಿದ ಬೆನ್ನಲ್ಲೇ ರೇಣುಕಾ ಅವರ ಹೇಳಿಕೆಯು ಭಾರೀ ಸಂಚಲನ ಉಂಟು ಮಾಡಿದೆ.

ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಇದೆ ಎನ್ನುವುದು ಸತ್ಯ. ಸಂಸತ್ ಅಥವಾ ಇತರ ಕೆಲಸದ ಸ್ಥಳಗಳು ಇದಕ್ಕೆ ಹೊರತಾಗಿದೆ ಎಂದು ಭಾವಿಸಬೇಡಿ ಎಂದು ರೇಣುಕಾ ಚೌಧರಿ ತಿಳಿಸಿದ್ದಾರೆ.