ಅಜ್ಞಾತ ವಾಸದಲ್ಲಿ ಭೂಗತ ಪಾತಕಿ ದಾವೂದ್ ಗೆ ಖಿನ್ನತೆ

ಅಜ್ಞಾತ ವಾಸದಲ್ಲಿ ಭೂಗತ ಪಾತಕಿ ದಾವೂದ್ ಗೆ ಖಿನ್ನತೆ

HSA   ¦    Nov 26, 2017 03:41:45 PM (IST)
ಅಜ್ಞಾತ ವಾಸದಲ್ಲಿ ಭೂಗತ ಪಾತಕಿ ದಾವೂದ್ ಗೆ ಖಿನ್ನತೆ

ಥಾಣೆ: ತನ್ನ ಒಂದು ಕರೆಯಿಂದ ಉದ್ಯಮಿಗಳ ಎದೆಯಲ್ಲಿ ನಡುಕ ಮೂಡಿಸುತ್ತಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತ ಸರ್ಕಾರದ ಭೀತಿಯಿಂದ ಅಜ್ಞಾತವಾಸದಲ್ಲಿ ಇರುವುದು ಮಾತ್ರವಲ್ಲದೆ, ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂದು ಆತನ ಸೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ಭಾರತದ ತನಿಖಾಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾನೆ.

ಆದರೆ ದಾವೂದ್ ಖಿನ್ನತೆಗೆ ಕಾರಣವೇನೆಂದರೆ ಆತನ ಏಕೈಕ ಪುತ್ರ ಮೊಯಿನ್ ನವಾಜ್ ಡಿ. ಕಸ್ಕರ್(31) ಧರ್ಮಗುರುವಾಗಲು ನಿರ್ಧರಿಸಿರುವುದು. ದಾವೂದ್ ನ ಪಾಪ ಕೃತ್ಯಗಳಿಂದ ಬೇಸತ್ತಿರುವ ಆತನ ಮಗ ಧರ್ಮಗುರುವಾಗುವ ನಿರ್ಧಾರ ತೆಗೆದುಕೊಂಡಿದ್ದಾನೆ. ದಾವೂದ್ ನಿಂದಾಗಿ ಆತನ ಕುಟುಂಬ, ಮಕ್ಕಳಿಗೆ ಕೆಟ್ಟ ಹೆಸರು ಬಂದಿದೆ ಎನ್ನುವುದೇ ನವಾಜ್ ಅಭಿಪ್ರಾಯ.

ಇದೆಲ್ಲವನ್ನೂ ಮುಂಬಯಿ ಪೊಲೀಸರ ಬಂಧನದಲ್ಲಿರುವ ದಾವೂದ್ ಸೋದರ ಇಕ್ಬಾಲ್ ಕಸ್ಕರ್ ಬಹಿರಂಗಪಡಿಸಿದ್ದಾನೆ. ಮಗನ ನಿರ್ಧಾರದಿಂದ ತನ್ನ ಸಾಮಾಜ್ರ್ಯಕ್ಕೆ ಯಾರೂ ಉತ್ತರಾಧಿಕಾರಿಯೇ ಇಲ್ಲವೆನ್ನುವ ಕೊರಗು ದಾವೂದ್ ನನ್ನು ಕಾಡುತ್ತಿದೆ. ಹೀಗಾಗಿ ಆತ ಖಿನ್ನತೆಗೆ ಒಳಗಾಗಿದ್ದಾನೆ.

ದಾವೂದ್ ಸೋದರರಲ್ಲಿ ಕೆಲವರು ಸಾವನ್ನಪ್ಪಿದ್ದಾರೆ. ಅನೀಸ್ ಇಬ್ರಾಹಿಂ ಕಸ್ಕರ್ ಗೆ ವಯಸ್ಸಾಗಿದೆ. ಹತ್ತಿರದ ಸಂಬಂಧಿಗಳ ಬಗ್ಗೆ ದಾವೂದ್ ಗೆ ವಿಶ್ವಾಸವಿಲ್ಲವೆಂದು ಆತನ ಸೋದರ ಬಹಿರಂಗಪಡಿಸಿದ್ದಾನೆ.