ಕೊರೋನಾ ಅಪ್ಡೇಟ್: 24 ಗಂಟೆಯಲ್ಲಿ 10584 ಮಂದಿಯಲ್ಲಿ ಕೊರೋನಾ ಸೋಂಕು ದೃಢ

ಕೊರೋನಾ ಅಪ್ಡೇಟ್: 24 ಗಂಟೆಯಲ್ಲಿ 10584 ಮಂದಿಯಲ್ಲಿ ಕೊರೋನಾ ಸೋಂಕು ದೃಢ

MS   ¦    Feb 23, 2021 02:25:38 PM (IST)
ಕೊರೋನಾ ಅಪ್ಡೇಟ್: 24 ಗಂಟೆಯಲ್ಲಿ 10584 ಮಂದಿಯಲ್ಲಿ ಕೊರೋನಾ ಸೋಂಕು ದೃಢ

ನವದೆಹಲಿ : ದೇಶದಲ್ಲಿ ಎರಡನೇ ಅಲೆಯ ಕೊರೋನ ಹಾವಳಿ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 10584 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಹಾಗೂ 78 ಮಂದಿ ಮೃತಪಟ್ಟಿದ್ದಾರೆ.

ಮಾರಕ ಕೊರೋನಾ ಇದುವರೆಗೆ 1,56,463 ಮಂದಿಯ ಪ್ರಾಣ ಆಹುತಿ ಪಡೆದಿದ್ದು, 24ಗಂಟೆಯಲ್ಲಿ 78 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,10,16 , 434 ಕ್ಕೆ ತಲುಪಿದೆ.

ಕೊರೋನಾ ಸೋಂಕಿಗೆ ತುತ್ತಾಗಿದ್ದ 1,07,12,665 ಮಂದಿ ಸೋಂಕಿನಿಂದ ಮುಕ್ತಿ ಪಡೆದಿದ್ದು, ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 1,47,306 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಕೊರೋನಾ ಸೋಂಕಿಗೆ ತುತ್ತಾಗಿದ್ದ 13255 ಮಂದಿ ಗುಣಮುಖರಾಗಿದ್ದಾರೆ.

ಇನ್ನೊಂದೆಡೆ, ದೇಶದಲ್ಲಿ ಇದುವರೆಗೆ 1,17 , 45,552 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದ್ದು, ಕೋರೋಣ ಲಸಿಕೆ ಅಭಿಯಾನ ಮುಂದುವರೆದಿದೆ.