ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಟಿ ವಿ ಸ್ಫೋಟ: ಒಬ್ಬರು ಸಾವು, ಮತ್ತಿಬ್ಬರಿಗೆ ಗಂಭೀರ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಟಿ ವಿ ಸ್ಫೋಟ: ಒಬ್ಬರು ಸಾವು, ಮತ್ತಿಬ್ಬರಿಗೆ ಗಂಭೀರ

YK   ¦    Feb 23, 2020 10:01:48 AM (IST)
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಟಿ ವಿ ಸ್ಫೋಟ: ಒಬ್ಬರು ಸಾವು, ಮತ್ತಿಬ್ಬರಿಗೆ ಗಂಭೀರ

ಭುವನೇಶ್ವರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಟಿ.ವಿ.ಸ್ಫೋಟಗೊಂಢು ಮಹಿಳೆಯೊಬ್ಬರು ಸಾವನ್ನಪ್ಪಿ, ಪತಿ ಹಾಗೂ ಆರು ತಿಂಗಳ ಪುತ್ರಿ ಗಂಭೀರ ಗಾಯಗೊಂಡಿರುವ ಘಟನೆ ಒಡಿಶಾದ ಸುಂದರಗಢ ಜಿಲ್ಲೆಯಲ್ಲಿ ನಡೆದಿದೆ.

ಲಹಾಂಡಾಬುಡಾ ಗ್ರಾಮದ ಬಾಬಿ ನಾಯಕ್ ಅವರು ತನ್ನ ಪತಿ ದಿಲೇಶ್ವರ ನಾಯಕ್ ಹಾಗೂ ಪುತ್ರಿಯೊಂದಿಗೆ ಶುಕ್ರವಾರ ಧಾರಾವಾಹಿ ನೋಡುತ್ತಿರುವ ಸಂದರ್ಭ ಟಿವಿ ಸ್ಫೋಟಗೊಂಡಿದೆ.

ಸ್ಫೋಟದ ಸದ್ದು ಕೇಳಿದ ಕೂಡಲೇ ನೆರೆಯವರು ಅಲ್ಲಿಗೆ ಧಾವಿಸಿದರು. ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕುಟುಂಬವನ್ನು ರಕ್ಷಿಸಿದರು. ಅನಂತರ ಮೂವರನ್ನು ಸ್ಥಳೀಯ ಪೊಲೀಸರ ನೆರವಿನಿಂದ 108 ಆಂಬ್ಯುಲೆನ್ಸ್ ಮೂಲಕ ಸುಂದರಗಢದ ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದರು.