ಚೆನ್ನೈ: ಬಜೆಟ್ ಮಂಡನೆಗೂ ಮುನ್ನ ವಿರೋಧ ಪಕ್ಷಕ್ಕೆ ಮಾತನಾಡಲು ಅವಕಾಶ ನೀಡಬೇಕು ಎಂದು ಕೋರಿ ಡಿಎಂಕೆ ಉಪ ನಾಯಕ ದೊರೈಮುರಗನ್ ಅವರು ಸ್ಪೀಕರ್ ಪಿ. ಧನ್ಪಾಲ್ ಅವರಿಗೆ ಮನವಿಗೆ ಅನುಮತಿ ನೀಡದ ಕಾರಣ ಬಜೆಟ್ ಮಂಡನೆಯನ್ನು ಬಹಿಷ್ಕರಿಸಿ ಡಿಎಂಕೆ ಸದಸ್ಯರು ಸಭಾತ್ಯಾಗ ಮಾಡಿದರು.
ತಮಿಳುನಾಡು ವಿಧಾನಸಭೆಯ 2021-22ನೇ ಆರ್ಥಿಕ ವರ್ಷದ ಮಧ್ಯಂತರ ಬಜೆಟ್ ಮಂಡನೆಯನ್ನು ಬಹಿಷ್ಕರಿಸಿದ್ದು, ದೂರೈಮುರಗನ್ ಅವರಿಗೆ ಬಜೆಟ್ ಬಗ್ಗೆ ಪಕ್ಷದ ಅಭಿಪ್ರಾಯವನ್ನು ತಿಳಿಸಲು ಅವಕಾಶ ನೀಡಬೇಕು ಎಂದು ಡಿಎಂಕೆ ಸದಸ್ಯರು ಪಟ್ಟು ಹಿಡಿದರು.
ಆದರೆ ಅದಕ್ಕೆ ಅನುಮತಿ ಸಿಗದ ಕಾರಣ ತಮಿಳುನಾಡು ಉಪಮುಖ್ಯಮಂತ್ರಿ ಪನ್ನೀರ್ಸೆಲ್ವಂ ಅವರು ಬಜೆಟ್ ಮಂಡನೆ ಪ್ರಕ್ರಿಯೆ ಆರಂಭಿಸಿದ ತಕ್ಷಣ ಇದನ್ನು ವಿರೋಧಿಸಿ ಡಿಎಂಕೆ ಸದಸ್ಯರು ಮಂಗಳವಾರ ಸದನದಿಂದ ಹೊರ ನಡೆದರು.