ಭೂಗತ ದೊರೆ ದಾವೂದ್ ಅಕ್ರಮ ಆಸ್ತಿ ಮುಟ್ಟುಗೋಲಿಗೆ ಸುಪ್ರೀಂ ಆದೇಶ

ಭೂಗತ ದೊರೆ ದಾವೂದ್ ಅಕ್ರಮ ಆಸ್ತಿ ಮುಟ್ಟುಗೋಲಿಗೆ ಸುಪ್ರೀಂ ಆದೇಶ

SRJ   ¦    Apr 20, 2018 02:43:20 PM (IST)
ಭೂಗತ ದೊರೆ ದಾವೂದ್ ಅಕ್ರಮ ಆಸ್ತಿ ಮುಟ್ಟುಗೋಲಿಗೆ ಸುಪ್ರೀಂ ಆದೇಶ

ಹೊಸದಿಲ್ಲಿ: ಭೂಗತ ಲೋಕದ ದೊರೆ, 1993ರ ಮುಂಬೈ ಬ್ಲಾಸ್ಟ್ ನ ಮಾಸ್ಟರ್ ಮೈಂಡ್ ಮತ್ತು ಡಿ ಕಂಪೆನಿ ಬಾಸ್ ಆಗಿರುವ ಉಗ್ರಗಾಮಿ ದಾವೂದ್ ಇಬ್ರಾಹಿಂ ಅವರ ಅಕ್ರಮ ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಮುಂಬೈನಲ್ಲಿರುವ ದಾವೂದ್ ಆಸ್ತಿ-ಪಾಸ್ತಿಯನ್ನು ವಶಕ್ಕೆ ಪಡೆಯುತ್ತಿರುವ ಬಗ್ಗೆ ಪ್ರಶ್ನೆ ಮಾಡಿ, ತಾಯಿ ಹಾಗೂ ಸಹೋದರಿ ಸಲ್ಲಿಸಿದ ಅರ್ಜಿಯನ್ನು ಜಸ್ಟಿಸ್ ಆರ್.ಕೆ.ಅಗರ್ ವಾಲ್ ನೇತೃತ್ವದ ಏಕಸದಸ್ಯ ಪೀಠ ವಜಾಗೊಳಿಸಿದೆ.
ದಾವೂದ್ ಅವರಿಗೆ ಸೇರಿದ ವಸತಿ ಕಟ್ಟಡಗಳನ್ನು ಸರಕಾರ ತನ್ನ ವಶಕ್ಕೆ ಪಡೆಯುವ ಪ್ರಕ್ರಿಯೆ ಕಾನೂನು ಬಾಹಿರವಾಗಿದ್ದು, ಇದರ ಮುಟ್ಟುಗೋಲಿಗೆ ಸಂಬಂಧಿಸಿ ತಮಗೆ ಯಾವುದೇ ರೀತಿಯ ನೋಟಿಸ್ ಜಾರಿ ಮಾಡಲಾಗಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಕಳೆದ ವರ್ಷ ದಕ್ಷಿಣ ಮುಂಬೈನಲ್ಲಿ ಇರುವ ದಾವೂದ್ ಮಾಲಕತ್ವದ ಮೂರು ಅಸ್ತಿಗಳನ್ನು 11.58 ಕೋಟಿ ರೂಪಾಯಿಗೆ ಹರಾಜು ಹಾಕಲಾಗಿತ್ತು. ಕಳ್ಳ ಸಾಗಾಣೆ ಹಾಗೂ ವಿದೇಶಿ ವಿನಿಮಯ ಆಸ್ತಿಯ ಖರ್ಚು ಕಾಯಿದೆ ಅಡಿಯಲ್ಲಿ ದಾವೂದ್ ಆಸ್ತಿಯನ್ನು ಹರಾಜಿಗಿಡಲಾಗಿತ್ತು.