ಮ್ಯಾನ್ಮಾರ್ ನಲ್ಲಿ ಭೂಕುಸಿತ: 11 ಮಂದಿ ಸಾವು, ಹಲವರು ನಾಪತ್ತೆ

ಮ್ಯಾನ್ಮಾರ್ ನಲ್ಲಿ ಭೂಕುಸಿತ: 11 ಮಂದಿ ಸಾವು, ಹಲವರು ನಾಪತ್ತೆ

May 24, 2016 02:57:01 PM (IST)

ಯಾಂಗಾನ್: ಮ್ಯಾನ್ಮಾರ್ ಉತ್ತರ ಭಾಗದ ಕಚಿನ್ ಪ್ರಾಂತ್ಯದ ಹಾಕಂತ್ ಎಂಬಲ್ಲಿ ಕಳೆದ ರಾತ್ರಿ ಭೂಕುಸಿತ ಸಂಭವಿಸಿದ್ದು, 11 ಮಂದಿ ಮೃತಪಟ್ಟು ಹಲವರು ನಾಪತ್ತೆಯಾಗಿರುವುದಾಗಿ ಮಂಗಳವಾರ ತಿಳಿದುಬಂದಿದೆ.

ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ ಪರಿಣಾಮ ಹಲವು ಮಣ್ಣಿನ ಕೆಳಗೆ ಸಿಲುಕಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಭೂಕುಸಿತ ಸಂಭವಿಸುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದು, ಈ ವರೆಗೂ 11 ಮೃತ ದೇಹಳನ್ನು ಹೊರ ತೆಗೆದಿದ್ದಾರೆನ್ನಲಾಗಿದೆ. ಮತ್ತಷ್ಟು ಜನರು ಸಿಲುಕಿಕೊಂಡಿರುವ ಶಂಕೆಗಳು ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.