ಸಮಾಜವಾದಿ ಮಾಜಿ ಹಿರಿಯ ನಾಯಕ ಅಮರ್ ಸಿಂಗ್ ನಿಧನ

ಸಮಾಜವಾದಿ ಮಾಜಿ ಹಿರಿಯ ನಾಯಕ ಅಮರ್ ಸಿಂಗ್ ನಿಧನ

HSA   ¦    Aug 01, 2020 05:25:37 PM (IST)
ಸಮಾಜವಾದಿ ಮಾಜಿ ಹಿರಿಯ ನಾಯಕ ಅಮರ್ ಸಿಂಗ್ ನಿಧನ

ನವದೆಹಲಿ: ಸಮಾಜವಾದಿ ಪಕ್ಷದ ಮಾಜಿ ಹಿರಿಯ ನಾಯಕ ಮತ್ತು ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್ ಅವರು ಶನಿವಾರ ಸಿಂಗಾಪುರದಲ್ಲಿ ನಿಧನರಾದರು ಎಂದು ವರದಿಗಳು ಹೇಳಿವೆ.

64ರ ಹರೆಯದ ಅಮರ್ ಸಿಂಗ್ ಅವರು ಕೆಲವು ತಿಂಗಳಿಂದ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 2013ರಲ್ಲಿ ಅಮರ್ ಸಿಂಗ್ ಅವರು ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದರು. ಇದರ ಬಳಿಕ ಅವರು ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದರು.

ಮಾರ್ಚ್ 22ರಂದು ಅವರು ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದರು. ಇದರಲ್ಲಿ ಅವರು ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುವಂತೆ ಕರೆ ನೀಡಿದ್ದರು.