ಐಸಿಸ್ ಉಗ್ರರೊಂದಿಗೆ ನಂಟು: ಕಲಬುರಗಿಯ ವ್ಯಕ್ತಿಯ ಬಂಧನ

ಐಸಿಸ್ ಉಗ್ರರೊಂದಿಗೆ ನಂಟು: ಕಲಬುರಗಿಯ ವ್ಯಕ್ತಿಯ ಬಂಧನ

Dec 11, 2015 04:02:57 PM (IST)

ಜೈಪುರ: ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿಯ ಹಮ್ಮದ್ ಸಿರಾಜುದ್ದೀನ್ ಎಂಬುವವರನ್ನು ಜೈಪುರದಲ್ಲಿ ಗುರುವಾರ ಬಂಧಿಸಲಾಗಿದೆ.

ಜೈಪುರದಲ್ಲಿ ಐಒಸಿಯಲ್ಲಿ ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿರುವ ಕಲಬುರಗಿ ಮೂಲದ ಮೊಹಮ್ಮದ್‌ ಸಿರಾಜುದ್ದೀನ್‌ ಬಂಧಿತ. ಈತನನ್ನು ವಿಶೇಷ ಕಾರ್ಯಾಚರಣೆ ಪಡೆ ಮತ್ತು ರಾಜಸ್ಥಾನ ಉಗ್ರ ನಿಗ್ರಹ ಪಡೆ ಸಿಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಎಟಿಎಸ್‌ ಮತ್ತು ಎಸ್‌ಒಜಿಯ ಹೆಚ್ಚುವರಿ ಡಿಜಿಪಿ ಆಲೋಕ್‌ ತ್ರಿಪಾಠಿ ತಿಳಿಸಿದ್ದಾರೆ.

ಐಎಸ್ ಜೊತೆ ಸಂಪರ್ಕ, ರಹಸ್ಯ ಮಾಹಿತಿಗಳನ್ನು ಐಎಸ್ ಗೆ ರವಾನೆ ಹಾಗೂ ದೇಶದಲ್ಲಿ ಉಗ್ರ ಸಂಘಟನೆಗೆ ಸದಸ್ಯರನ್ನು ನೇಮಕ ಮಾಡುತ್ತಿದ್ದ ಆರೋಪವನ್ನು ಸಿರಾಜುದ್ದೀನ್ ಮೇಲೆ ಹೊರಿಸಲಾಗಿದೆ ಎಂದು ಎಟಿಎಸ್ ಮತ್ತು ಎಸ್‍ಒಜಿ ಹೆಚ್ಚುವರಿ ಡಿಜಿಪಿ ಅಲೋಕ್ ತ್ರಿಪಾಠಿ ತಿಳಿಸಿದ್ದಾರೆ. ದೂರೊಂದರ ಆಧಾರದಲ್ಲಿ ಸಿರಾಜುದ್ದೀನ್ ವಾಟ್ಸ್ ಆಪ್ ಫೇಸ್ ಬುಕ್ ಪರಿಶೀಲಿಸಲಾಗಿದ್ದು, ಆತ ಐಎಸ್‍ಗೆ ಸೇರುವಂತೆ ಆನ್ ಲೈನ್‍ನಲ್ಲೇ ಯುವಕರನ್ನು ಹುರಿದುಂಬಿಸುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

ಅಕ್ರಮ ಚಟುವಟಿಕೆ (ತಡೆ) ಕಾಯ್ದೆ ಅನ್ವಯ ಸಿರಾಜುದ್ದೀನ್‌ನನ್ನು ಬಂಧಿಸಲಾಗಿದೆ. ಐಸಿಸ್‌ ಉಗ್ರ ಸಂಘಟನೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಈತ ಸರಕಾರಿ ಮಾಹಿತಿಗಳನ್ನು ಸಂಘಟನೆಗೆ ಒದಗಿಸುತ್ತಿದ್ದ ಮತ್ತು ಈ ಸಂಘಟನೆಗೆ ಭಾರತದಿಂದ ಉಗ್ರರನ್ನು ನೇಮಿಸಲು ಸಹಕರಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.