ಸಾಮೂಹಿಕ ಅತ್ಯಾಚಾರಕ್ಕೆ ಸಾಕ್ಷಿ ಹೇಳದಂತೆ ಹೆತ್ತವರಿಗೆ ಲಂಚದ ಆಮಿಷ

ಸಾಮೂಹಿಕ ಅತ್ಯಾಚಾರಕ್ಕೆ ಸಾಕ್ಷಿ ಹೇಳದಂತೆ ಹೆತ್ತವರಿಗೆ ಲಂಚದ ಆಮಿಷ

SRJ   ¦    Apr 17, 2018 05:34:50 PM (IST)
ಸಾಮೂಹಿಕ ಅತ್ಯಾಚಾರಕ್ಕೆ ಸಾಕ್ಷಿ ಹೇಳದಂತೆ ಹೆತ್ತವರಿಗೆ ಲಂಚದ ಆಮಿಷ

ನವದೆಹಲಿ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 15 ವರ್ಷದ ಬಾಲಕಿ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ನೀಡಿರುವ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಾಯಪಡಿಸಿ, ಬಾಲಕಿಯ ಹೆತ್ತವರಿಗೆ ಲಂಚ ನೀಡಲಾಗಿತ್ತು.

ಆದರೆ ಇದನ್ನು ಅರಿತ ಬಾಲಕಿ ಹೆತ್ತವರು ಲಂಚ ರೂಪದಲ್ಲಿ ಪಡೆದ ಹಣವನ್ನು ಪೊಲೀಸ್ ಠಾಣೆಗೆ ತಂದೊಪ್ಪಿಸಿ, ತನ್ನ ಹೆತ್ತವರ ವಿರುದ್ಧವೇ ದೂರು ನೀಡಿ ಸಾಹಸ ಮೆರೆದಿದ್ದಾಳೆ. ಅಪರಾಧ ಸಂಚು, ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯ ಮತ್ತು ಅಪರಾಧ ಬೆದರಿಕೆ ಆರೋಪದಲ್ಲಿ ಬಾಲಕಿಯ ಹೆತ್ತವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯ ತಾಯಿಯನ್ನು ಈಗಾಗಲೇ ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಅಪ್ಪನ ಹುಡುಕಾಟದಲ್ಲಿ ತೊಡಗಿದ್ದಾರೆ. ಸ್ಥಳೀಯ ಜಮೀನು ದಲ್ಲಾಳಿ ಹಾಗೂ ಇನ್ನೋರ್ವ ವ್ಯಕ್ತಿ ಕಳೆದ ವರ್ಷ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅವರ ವಿರುದ್ಧ ಹೇಳಿಕೆ ನೀಡಬಾರದೆಂದು ಹೆತ್ತವರಿಗೆ ಅಪರಾಧಿಗಳು ಲಂಚದ ಆಮಿಷ ಒಡ್ಡಿದ್ದರು.