ಏರ್ ಇಂಡಿಯಾ ಏಕ್ಸ್ ಪ್ರೆಸ್ ಲ್ಯಾಂಡ್ ಆಗುವ ವೇಳೆ ಅವಘಡ: ಪ್ರಯಾಣಿಕರು ಪಾರು

ಏರ್ ಇಂಡಿಯಾ ಏಕ್ಸ್ ಪ್ರೆಸ್ ಲ್ಯಾಂಡ್ ಆಗುವ ವೇಳೆ ಅವಘಡ: ಪ್ರಯಾಣಿಕರು ಪಾರು

Sep 05, 2017 11:51:47 AM (IST)
ಏರ್ ಇಂಡಿಯಾ ಏಕ್ಸ್ ಪ್ರೆಸ್ ಲ್ಯಾಂಡ್ ಆಗುವ ವೇಳೆ ಅವಘಡ: ಪ್ರಯಾಣಿಕರು ಪಾರು

ಕೊಚ್ಚಿ: ಕೊಚ್ಚಿ ವಿಮಾನ ನಿಲ್ದಾಣದಲ್ಲಿ 102 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನೊಳಗೊಂಡ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಇಂದು ಬೆಳಗ್ಗೆ ಲ್ಯಾಂಡ್ ಆಗುವ ವೇಳೆ ಅವಘಡ ಸಂಭವಿಸಿದ್ದು, ಭಾರೀ ಅನಾಹುತವೊಂದು ಅದೃಷ್ಟಾವಶಾತ್ ತಪ್ಪಿದೆ.

ವಿಮಾನ ನಿಲುಗಡೆ ಆಗುವ ವೇಳೆ ಪಾರ್ಕಿಂಗ್ ವೇ ಕಡೆಗೆ ಸಮೀಪಿಸುತ್ತಿದ್ದಂತೆ ಪಥವನ್ನು ಬದಲಿಸಿದೆ. ಈ ಅವಘಡದಿಂದಾಗಿ ಬೋಯಿಂಗ್ 737-800 ವಿಮಾನದ ನೋಸ್ ವೀಲ್ ಜಖಂ ಆಗಿದೆ.  ಈ ಘಟನೆಯಲ್ಲಿ ಪ್ರಯಾಣಿಕರರಿಗೆ ಯಾವುದೇ ಹಾನಿಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲಾ ಪ್ರಯಾಣಿಕರನ್ನ ಏಣಿ ಮೂಲಕ ಕೆಳಗಿಳಿಸಲಾಯ್ತು ಎಂದು ಕೊಚಿನ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ನ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸದ್ಯ ಈ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಘಟನೆಯ ಬಗ್ಗೆ ಆಂತರಿಕ ತನಿಖೆ ಹಾಗೂ ನಾಗರೀಕ ವಿಮಾನಯಾನ ನಿರ್ದೇಶನಾಲಯದಿಂದ್ಲೂ ತನಿಖೆ ಆರಂಭವಾಗಿದೆ ಎಂದು ವರದಿಯಾಗಿದೆ