ನರೋಡಾ ಹತ್ಯಾಕಾಂಡ: ಮಾಯಾ ಕೊಡ್ನಾನಿಗೆ ಕ್ಲೀನ್ ಚಿಟ್

ನರೋಡಾ ಹತ್ಯಾಕಾಂಡ: ಮಾಯಾ ಕೊಡ್ನಾನಿಗೆ ಕ್ಲೀನ್ ಚಿಟ್

SRJ   ¦    Apr 20, 2018 12:55:03 PM (IST)
ನರೋಡಾ ಹತ್ಯಾಕಾಂಡ: ಮಾಯಾ ಕೊಡ್ನಾನಿಗೆ ಕ್ಲೀನ್ ಚಿಟ್

ಅಹ್ಮದಾಬಾದ್: ಗುಜರಾತ್ ನಲ್ಲಿ ನಡೆದ ನರೋಡಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ, ಮೋದಿ ಅವರ ಅವರ ಒಂದು ಕಾಲದ ಆಪ್ತ ಸಚಿವೆ ಮಾಯಾ ಕೊಡ್ನಾನಿ ಅವರಿಗೆ ಗುಜರಾತ್ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದೆ.

ನರೋಡಾ ಹತ್ಯಾಕಾಂಡದಲ್ಲಿ ಮಾಯಾ ಅವರು ನಿರ್ದೋಷಿ ಎಂದು ಹೈಕೋರ್ಟ್ ಆದೇಶ ನೀಡಿದ್ದು, ಬಜರಂಗ ದಳದ ಮಾಜಿ ನಾಯಕ ಬಾಬು ಬಜರಂಗಿ ಅವರಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯ ತೀರ್ಪನ್ನು ಎತ್ತಿ ಹಿಡಿದಿದೆ.

28 ವರ್ಷ ಶಿಕ್ಷೆ ಪಡೆದಿದ್ದ ಮಾಯಾ ಕೊಡ್ನಾನಿ ಸೇರಿದಂತೆ 29 ಮಂದಿ ಈ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನರೋಡಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಐ.ಟಿ ವಿಶೇಷ ನ್ಯಾಯಾಲಯದ ಮುಂದೆ ಮಾಯಾ ಕೊಡ್ನಾನಿ ಪರವಾಗಿ ಸಾಕ್ಷಿ ಹೇಳಿದ ಪ್ರತಿಫಲವಾಗಿ ಈ ಉಡುಗೊರೆ ಸಿಕ್ಕಿದೆ.

ಫೆಬ್ರವರಿ 28, 2002 ಘಟನೆ ನಡೆದ ಸಂದರ್ಭದಲ್ಲಿ ಮಾಯಾ ಕೊಡ್ನಾನಿ ಅವರು ಗುಜರಾತಿನ ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿದ್ದರು ಎಂದು ಸೆಷನ್ಸ್ ಕೋರ್ಟ್ ನಲ್ಲಿ ಅಮಿತ್ ಶಾ ಹೇಳಿಕೆ ಕೊಟ್ಟಿದ್ದಾರೆ.

ವೃತ್ತಿಯಲ್ಲಿ ಸ್ತ್ರೀರೋಗ ತಜ್ಞೆಯಾಗಿದ್ದ ಮಾಯಾ ಅವರು ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು.