ಜೂನ್ 6ರಂದು ಕೇರಳಕ್ಕೆ ಮುಂಗಾರು ಮಳೆ

ಜೂನ್ 6ರಂದು ಕೇರಳಕ್ಕೆ ಮುಂಗಾರು ಮಳೆ

HSA   ¦    May 15, 2019 02:35:04 PM (IST)
ಜೂನ್ 6ರಂದು ಕೇರಳಕ್ಕೆ ಮುಂಗಾರು ಮಳೆ

ನವದೆಹಲಿ: ಮುಂಗಾರು ಮಳೆಯು ಐದು ದಿನ ತಡವಾಗಿ ಜೂನ್ 6ರಂದು ಕೇರಳಕ್ಕೆ ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಬುಧವಾರ ತಿಳಿಸಿದೆ.

ಖಾಸಗಿ ಹವಾಮಾನ ಅಂದಾಜು ಸಂಸ್ಥೆ ಸ್ಕೈಮೆಟ್ ಕೇರಳಕ್ಕೆ ಜೂನ್ 4ರಂದು ಆಗಮಿಸಲಿದೆ ಎಂದು ಹೇಳಿತ್ತು. ಆದರೆ ಭಾರತೀಯ ಹವಾಮಾನ ಇಲಾಖೆಯು ಜೂನ್ 6ರಂದು ಆಗಮಿಸಲಿದೆ ಎಂದು ಹೇಳಿದೆ.

ಮೇ18-19ರಂದು ಮುಂಗಾರು ಮಾರುತವು ಸಾಗಿ ಬರಲು ಆಗ್ನೇಯ ಬಂಗಾಲ ಕೊಲ್ಲಿಯಲ್ಲಿ ಅನುಕೂಲಕರ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ವರ್ಷ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆಯಾಗಲಿದೆ ಎಂದು ನಿನ್ನೆ ಸ್ಕೈಮೆಟ್ ತಿಳಿಸಿತ್ತು.