ಅತ್ಯಾಚಾರ ಪ್ರಕರಣ: ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ

ಅತ್ಯಾಚಾರ ಪ್ರಕರಣ: ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ

SRJ   ¦    Apr 25, 2018 04:23:14 PM (IST)
ಅತ್ಯಾಚಾರ ಪ್ರಕರಣ: ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ

ಜೋಧಪುರ: 2013ರ ಆಗಸ್ಟ್ 13ರಂದು ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಹಿನ್ನಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಅಸರಾಂ ಬಾಪು ಅವರಿಗೆ, ಜೋದಪುರದ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದೆ.

77ರ ಹರೆಯದ ಸ್ವಯಂಘೋಷಿತ ದೇವಮಾನವ ಅಸರಾಂ ಬಾಪು ಪ್ರಕರಣದ ವಿಚಾರಣೆ ನಡೆಸಿದ ಜೋಧಪುರ ನ್ಯಾಯಾಲಯ, ಆತ ತಪ್ಪಿತಸ್ಥ ಎಂದು ತೀರ್ಪು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣ ಕೂಡ ಪ್ರಕಟಿಸಿದೆ. ಅಸರಾಂ ಬಾಪು ಅವರಿಗೆ ಜೀವಾವಧಿ ಶಿಕ್ಷೆ ಮತ್ತು ಅವರ ಸಂಗಡಿಗರಾದ ಶರದ್ ಹಾಗು ಶಿಲ್ಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.

ಮತ್ತಿಬ್ಬರು ಆರೋಪಿಗಳಾದ ಶಿವ ಮತ್ತು ಪ್ರಕಾಶ್ ಎಂಬವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಈ ನಡುವೆ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಸಂತ್ರಸ್ಥೆಯ ತಂದೆ ನಮ್ಮ ಹೋರಾಟಕ್ಕೆ ಬೆಲೆ ಸಿಕ್ಕಿದೆ, ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ, ಅಪಹರಣಕ್ಕೊಳಗಾದ ಸಾಕ್ಷಿದಾರರಿಗೆ ಕೂಡ ನ್ಯಾಯ ಸಿಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.