ರಾಮಜನ್ಮಭೂಮಿ-ಬಾಬರಿ ವಿವಾದದ ಸುಪ್ರೀಂ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ

ರಾಮಜನ್ಮಭೂಮಿ-ಬಾಬರಿ ವಿವಾದದ ಸುಪ್ರೀಂ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ

HSA   ¦    Dec 02, 2019 05:15:38 PM (IST)
ರಾಮಜನ್ಮಭೂಮಿ-ಬಾಬರಿ ವಿವಾದದ ಸುಪ್ರೀಂ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ

ನವದೆಹಲಿ: ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನ ಮರುಪರಿಶೀಲನೆಗಾಗಿ ಜಮಾತೆ ಉಲೇಮಾ ಎ ಹಿಂದ್ ಸೋಮವಾರ(ಡಿ.2)  ಅರ್ಜಿ ಸಲ್ಲಿಸಿದೆ.

ಮೌಲಾನಾ ಸೈದ್ ಅಸ್ಹದ್ ರಶೀದ್ ಅವರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಜಮಾತೆ ಉಲೇಮಾ ಎ ಹಿಂದ್ ನ ಮೌಲಾನಾ ಅರ್ಷದ್ ಮದಾನಿ ಅವರು ಈ ಬಗ್ಗೆ ಮಾತನಾಡುತ್ತಾ, ಸುಪ್ರೀಂಕೋರ್ಟ್ ನ ತೀರ್ಪು ಜನರ ಊಹೆಗೆ ನಿಲುಕದ್ದು. ಇದೊಂದು ಗೌರವದ ಪ್ರಶ್ನೆ ಎನ್ನುವ ಕಾರಣಕ್ಕಾಗಿ ನಾವು ಮರು ಪರಿಶೀಲನಾ ಅರ್ಜಿ ಸಲ್ಲಿಸುತ್ತಿಲ್ಲ. ಇದೊಂದು ಧಾರ್ಮಿಕ ವಿಚಾರವಾಗಿದೆ ಎಂದರು.

ರಾಜೀವ್ ಧವನ್ ಸಹಿತ ನಮ್ಮ ಎಲ್ಲಾ ವಕೀಲರು ಮರು ಪರಿಶೀಲನಾ ಅರ್ಜಿ ತಯಾರು ಮಾಡಿದ್ದಾರೆ ಮತ್ತು ಎರಡರಿಂದ ನಾಲ್ಕು ದಿನದ ಒಳಗಡೆ ಇದನ್ನು ಸಲ್ಲಿಸಲಾಗುವುದು ಎಂದರು.