
ಶ್ರೀಹರಿಕೋಟಾ : ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 18 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತ ತನ್ನ ಬಾಹ್ಯಾಕಾಶ ಜೈತ್ರಯಾತ್ರೆ ಮುಂದುವರಿಸಿದೆ.
ಬ್ರೆಜಿಲ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಬೆಜಿಲ್ ನ ಚೊಚ್ಚಲ ಉಪಗ್ರಹ ಅಮೆಝೇನಿಯಾ -1 ಕೂಡ ಸೇರಿದೆ. ಪಿಎಸ್‌ಎಲ್ ವಿ ರಾಕೇಟ್ ಮೂಲಕ ಉಪಗ್ರಹಗಳನ್ನು ಉಡಾಯಿಸಲಾಯಿತು ಇಸ್ರೋ ಸಾಧನೆಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.
ಯಶಸ್ವಿಯಾಗಿ ಉಪಗ್ರಹವನ್ನು ಉಡಾಯಿಸಿ ಸಾಧನೆ ಮಾಡಿದ ವಿಜ್ಞಾನಿಗಳನ್ನು ಪ್ರಧಾನಿ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.