ಕೊರೋನಾ ಎರಡನೇ ಅಲ್ಲೇ ಪ್ರಭಾವ, ಬಹುತೇಕ ವಿಮಾನಗಳನ್ನು ಸ್ಥಗಿತಗೊಳಿಸಿದ ಏರ್ ಏಷ್ಯಾ

ಕೊರೋನಾ ಎರಡನೇ ಅಲ್ಲೇ ಪ್ರಭಾವ, ಬಹುತೇಕ ವಿಮಾನಗಳನ್ನು ಸ್ಥಗಿತಗೊಳಿಸಿದ ಏರ್ ಏಷ್ಯಾ

Ms   ¦    Jun 10, 2021 03:44:51 PM (IST)
ಕೊರೋನಾ ಎರಡನೇ ಅಲ್ಲೇ ಪ್ರಭಾವ, ಬಹುತೇಕ ವಿಮಾನಗಳನ್ನು ಸ್ಥಗಿತಗೊಳಿಸಿದ ಏರ್ ಏಷ್ಯಾ

ಕೌಲಾಲಂಪುರ : ದೇಶದಲ್ಲಿ ಮಾತ್ರವಲ್ಲದೆ ಏಷ್ಯಾಖಂಡದಲ್ಲೇ ಕೊರೋನ ಎರಡನೇ ಅಲೆ ಪ್ರಭಾವ ಬಹಳ ಹೆಚ್ಚಾಗಿದ್ದು, ಏಷ್ಯಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ಎರಡನೆ ಅಲೆಯ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಬಹುತೇಕ ಸ್ಥಗಿತಗೊಳಿಸಲಾಗಿದೆ ಎಂದು ಏರ್ ಏಷ್ಯಾ ಹೇಳಿದೆ . 

ಏರ್ ಏಷ್ಯಾ ಮಲೇಷ್ಯಾ ಮೂಲದ ವಿಮಾನ ಸಂಸ್ಥೆಯಾಗಿದ್ದು, 25 ದೇಶಗಳಲ್ಲಿ ಇರುವ 165 ನಗರಗಳಿಗೆ ಏರ್ ಏಷ್ಯಾ ವಿಮಾನ ಹಾರಾಟ ನಡೆಸುತ್ತಿತ್ತು . ಕೊರೋನಾ ಎರಡನೆ ಅಲೆ ವೈಮಾನಿಕ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ . ಇದರಿಂದ ಸಂಸ್ಥೆಯ ವಿಮಾನ ಹಾರಾಟ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ ಎಂದು ಏರ್‌ ಏಷ್ಯಾ ಪ್ರಕಟಿಸಿದೆ .