ಅಹ್ಮದಾಬಾದ್: ಗೋದ್ರಾ ರೈಲ್ವೆ ನಿಲ್ದಾಣದಲ್ಲಿ ಸಬರ್ ಮತಿ ಎಕ್ಸ್ ಪ್ರೆಸ್ ರೈಲಿಗೆ ಫಾರೂಕ್ ದಾಂತಿಯ ಮತ್ತು ಆತನ ಸಹಚರರು ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿಯೋರ್ವ 13 ವರ್ಷಗಳ ಬಳಿಕ ಪೊಲೀಸರ ಅತಿಥಿಯಾಗಿದ್ದಾನೆ.
ಫಾರೂಕ್ ದಾಂತಿಯ ಬಂಧಿತ ಆರೋಪಿ. ಬೆಂಕಿ ಹಚ್ಚಿ ಪರಾರಿಯಾಗಿದ್ದ ಈತ 2 ಲಕ್ಷ ಜನಸಂಖ್ಯೆ ಇರುವ ಗೋದ್ರಾದಲ್ಲೇ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಅಷ್ಟೇ ಅಲ್ಲದೇ, ಈತ ತನ್ನ ಹೆಸರು ಮತ್ತು ಮುಖ ಲಕ್ಷಣವನ್ನು ಬದಲಾಯಿಸುತ್ತಾ ಬಚ್ಚಿಟ್ಟುಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.