ಶ್ರೀನಗರ: ರಾಜ್ಯದ ಅಭಿವೃದ್ಧಿಗೆ ಹಾಗೂ ಕಾಶ್ಮೀರದ ಯುವಜನತೆಯ ಉದ್ಯೋಗವಕಾಶಕ್ಕಾಗಿ 80 ಸಾವಿರ ಕೋಟಿ ಅನುದಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಅವರು ಜಮ್ಮುಕಾಶ್ಮೀರದಲ್ಲಿ ವಿವಿಧ ಮೂಲಭೂತ ಸೌಲಭ್ಯ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಕೆಲವರು ಹೇಳುತ್ತಾರೆ ಭಾರತ ಚೀನವನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದು ಆದರೆ ಭಾರತ ಹಿಂದಿಕ್ಕಿದ್ದು ಮಾತ್ರವಲ್ಲದೆ ಚೀನವನ್ನು ಮುನ್ನಡೆಸುತ್ತಿದೆ ಎಂದರು.
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಮೂಲ ಮಂತ್ರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಆಗಿದ್ದು, ದೇಶದ ಯಾವುದೇ ಭಾಗ ಅಭಿವೃದ್ಧಿಯಿಂದ ವಂಚಿತವಾಗಬಾರದು. ಜಮ್ಮು-ಕಾಶ್ಮೀರ ಕೂಡ ಪ್ರಗತಿಯನ್ನು ಕಾಣಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮೋದಿ ಅಭಿಪ್ರಾಯಪಟ್ಟರು.