ಬಾಮಾಕೋ: ಪಶ್ಚಿಮ ಆಫ್ರಿಕಾ ದೇಶ ಮಾಲಿಯಲ್ಲಿ ಪಂಚತಾರಾ ಹೋಟೆಲ್ ಗೆ ನುಗ್ಗಿ 170 ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಇಬ್ಬರು ಉಗ್ರರನ್ನು ಹತ್ಯೆಗೈದಿರುವ ವಿಶೇಷ ಸೇನಾಪಡೆಗಳು 20 ಭಾರತೀಯರನ್ನು ಸುರಕ್ಷಿತವಾಗಿ ಹೊರತರಲಾಗಿದ್ದು, 27 ಅಮಾಯಕರು ಉಗ್ರರಿಗೆ ಬಲಿಯಾಗಿದ್ದಾರೆ.
ರ್ಯಾಡಿಸನ್ ಬ್ಲೂ ಎನ್ನುವುದು 190 ಕೊಠಡಿಗಳ ಐಷಾರಾಮಿ ಹೋಟೆಲ್. ಉಗ್ರರು ರಾಜತಾಂತ್ರಿಕ ಪ್ಲೇಟ್ಗಳುಳ್ಳ ಕಾರಿನಲ್ಲಿ ಹೋಟೆಲ್ ನುಗ್ಗಿದರು. ಶುಕ್ರವಾರ ಉಗ್ರರು ರಾಜತಾಂತ್ರಿಕ ಪ್ಲೇಟ್ಗಳುಳ್ಳ ಕಾರಿನಲ್ಲಿ ಹೋಟೆಲ್ ಕಾಂಪೌಂಡ್ನೊಳಕ್ಕೆ ಆಗಮಿಸಿದರು. ಸುಮಾರು 10ರಷ್ಟಿದ್ದ ಉಗ್ರರು ಏಕಾಏಕಿ ಗುಂಡು ಹಾರಿಸುತ್ತಾ ಒಳ ಪ್ರವೇಶಿಸಿದರು. ನಂತರ ಒಂದೊಂದೇ ಕೊಠಡಿಗೆ ತೆರಳಿ, ಅತಿಥಿಗಳು ಮತ್ತು ಹೋಟೆಲ್ ಸಿಬ್ಬಂದಿಯನ್ನು ಒತ್ತೆಯಾಗಿಟ್ಟುಕೊಂಡರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಮೆರಿಕದ ವಿಶೇಷ ಪಡೆಗಳು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ ಹಲವರನ್ನು ರಕ್ಷಿಸಿದೆ. ಒತ್ತೆಯಾಳುಗಳ ಪೈಕಿ ಅಮೆರಿಕ ಸರ್ಕಾರದ ಹಲವು ಅಧಿಕಾರಿಗಳೂ ಸೇರಿದ್ದಾರೆ ಎನ್ನಲಾಗಿದೆ.
ಉಗ್ರರು ಮಾಲಿಯ ಹೋಟೆಲ್ ಮೇಲೆ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ಆಗಸ್ಟ್ ನಲ್ಲಿ ಆಲಿಯ ಸೆವಾರೆ ಪಟ್ಟಣದಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿದ್ದ ಉಗ್ರರು 24 ಗಂಟೆಗಳ ಕಾಲ ಹೋಟೆಲನ್ನು ವಶದಲ್ಲಿರಿಸಿಕೊಂಡು ವಿಶ್ವಸಂಸ್ಥೆಯ ಐವರು ಸಿಬ್ಬಂದಿ ಮತ್ತು 4 ಸೈನಿಕರ ಹತ್ಯೆಗೈದಿದ್ದರು. ಮಾರ್ಚ್ನಲ್ಲಿ ಬಮಾಕೋದ ರೆಸ್ಟೋರೆಂಟ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಫ್ರಾನ್ಸ್ ಮತ್ತು ಬೆಲ್ಜಿಯಂನ ತಲಾ ಒಬ್ಬರು ಸೇರಿದಂತೆ ಐದು ಮಂದಿ ಸಾವಿಗೀಡಾಗಿದ್ದರು.