ಜಮ್ಮು-ಕಾಶ್ಮೀರ: ವೈಷ್ಣೋದೇವಿ ದರ್ಶನ ಮಾಡಿ ವಾಪಾಸ್ ಹೋಗುತ್ತಿದ್ದ ಸಂದರ್ಭ ಹೆಲಿಕಾಪ್ಟರ್ ಪತನವಾಗಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಜಮ್ಮು ಕಾಶ್ಮೀರದ ಕಟ್ರಾ ಬಳಿ ಸೋಮವಾರ ಸಂಭವಿಸಿದೆ.
ಹಿಮಾಲಯ ಹೆಲಿ ಸರ್ವಿಸ್ ಖಾಸಗಿ ಸಂಸ್ಥೆಯ ಈ ಹೆಲಿಕಾಪ್ಟರ್ ನಲ್ಲಿ ಆರು ಮಂದಿ ಭಕ್ತರು ಪ್ರಯಾಣಿಸುತ್ತಿದ್ದರು. ಸಾಂಚಿಚಾಟ್ ನಿಂದ ಕಟ್ರಾಗೆ ಬರುತ್ತಿದ್ದ ವೇಳೆ ವಿಪರೀತ ಮಂಜು ಮುಸುಕಿದ ವಾತಾವರಣದಿಂದಾಗಿ ಹೆಲಿಕಾಪ್ಟರ್ ಪತನಕ್ಕೀಡಾಗಿತ್ತು. ಹೆಲಿಕಾಪ್ಟರ್ ಕೆಳಗೆ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿರುವುದಾಗಿ ವರದಿ ತಿಳಿಸಿದೆ.
ಈ ಅಪಘಾತದಲ್ಲಿ ಪೈಲಟ್ ಕೂಡ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹೆಲಿಕಾಪ್ಟರ್ ಪೈಲಟ್ ಸುಮಿತ್ರ ವಿಜಯನ್ ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.