ಹೊಸದಿಲ್ಲಿ: ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಎಷ್ಟೇ ಅವಮಾನವಾದರೂ ದೇಶ ಬಿಟ್ಟು ಹೋಗುವ ಮಾತು ಯಾವತ್ತು ಹೇಳಿರಲಿಲ್ಲ. ಇದನ್ನು ನೋಡಿ ಅಮೀರ್ ಖಾನ್ ಕಲಿತುಕೊಳ್ಳಬೇಕು ಎಂದು ಅಮೀರ್ ಖಾನ್ ಹೇಳಿಕೆ ಪ್ರಸ್ತಾಪಿಸಿ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜನಾಥ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಪ್ರತಿಭಟನೆಗೆ ಇಳಿದಿವೆ. ಇಂದು ಸಂಸತ್ತ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಪ್ರಾರಂಭದಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಂವಿಧಾನ ರಚನಾಕಾರರಿಗೆ ಗೌರವ ಸಲ್ಲಿಸಿದರು.
ಸಂವಿಧಾನದಲ್ಲಿರುವ ಪದಗಳು ದುರುಪಯೋಗವಾಗಬಾರದು. ಆದರೆ ಜಾತ್ಯತೀತ ಎಂಬ ಪದ ರಾಜಕೀಯವಾಗಿ ಅತಿ ಹೆಚ್ಚು ದುರುಪಯೋಗವಾಗಿದೆ. ಅಷ್ಟೇ ಅಲ್ಲ ಸಂವಿಧಾನದಲ್ಲಿ ಜಾತ್ಯತೀತತೆ ಪದವನ್ನು ಸೇರಿಸುವ ಬಗ್ಗೆ ಅಂಬೇಡ್ಕರ್ ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಸಂವಿಧಾನದಲ್ಲಿ ಜಾತ್ಯತೀತತೆ, ಸಮಾಜವಾದ ಶಬ್ದ ಇಲ್ಲ ಎಂದು ಹೇಳಿದರು.