ಹೊಸದಿಲ್ಲಿ: ರೈತರನ್ನು ವಿದ್ಯಾವಂತರನ್ನಾಗಿ ಮಾಡಬೇಕಿದೆ. ಅವರನ್ನು ವಿದ್ಯಾವಂತರನ್ನಾಗಿ ಮಾಡಿದರೆ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾನುವಾರ ಆಕಾಶವಾಣಿಯಲ್ಲಿ ಪ್ರಸಾರವಾದ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ನ 14 ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಇಂಧನ ಉಳಿತಾಯ ಮಾಡುವುದು ತಾಪಪಾನ ಕಡಿಮೆ ಮಾಡಲು ಮೊದಲ ಪರಿಹಾರವಾಗಿದೆ, ಇದು ಪ್ರತಿಯೊಬ್ಬರ ಜವಬ್ದಾರಿ ಎಂದರು. ಡಿಸಂಬರ್ 14 ರಂದು ಇಂಧನ ಶಕ್ತಿ ಸಂರಕ್ಷಣಾ ದಿನ ಆಚರಿಸಲಾಗುತ್ತಿದ್ದು ,ಸರ್ಕಾರ ಇಂಧನ ಉಳಿತಾಯಕ್ಕಾಗಿ ಎಲ್ಇಡಿ ಬಲ್ಪ್ ಗಳಂತ ಅನೇಕ ಯೋಜನೆಗಳನ್ನು ತಂದಿದೆ ಎಂದರು.
ತಮಿಳುನಾಡಿನಲ್ಲಿ ಉಂಟಾದ ಪ್ರಕೃತಿ ವಿಕೋಪಕ್ಕೆ ಜಾಗತಿಕ ತಾಪಮಾನ ಕಾರಣ. ಇದನ್ನು ತಡೆಗಟ್ಟಲು ದೇಶಗಳು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಭಾರತದಲ್ಲಿ ಸುಮಾರು 200 ದಶಲಕ್ಷ ಮಂದಿಗೆ ಇನ್ನೂ ಕೂಡ ವಿದ್ಯುತ್ ಸಿಗುತ್ತಿಲ್ಲ. ಕಲ್ಲಿದ್ದಲು ಬಳಕೆಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ದೇಶವಾದರೂ ಅದರ ಬಳಕೆಯಲ್ಲಿ ಇತಿಮಿತ ಹಾಕುವುದನ್ನು ಒಪ್ಪುವುದಿಲ್ಲ. 2022ಕ್ಕೆ ನವೀಕರಣ ಮೂಲಗಳಿಂದ 175 ಗಿಗಾವಾಟ್ ವಿದ್ಯುತ್ ನ್ನು ಗಳಿಸುವ ಗುರಿಯನ್ನು ಭಾರತ ಹೊಂದಿದೆ ಎಂದರು.