ಹೊಸದಿಲ್ಲಿ: ದಿಲ್ಲಿ ಅಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್(ಡಿಡಿಸಿಎ) ನಲ್ಲಿ ನಡೆದ ಬಹುದೊಡ್ಡ ಲಂಚ ಹಗರಣಕ್ಕೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯೇ ಸೂತ್ರಧಾರ. ಎಂದು ಆಪ್ ನಾಯಕರು ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆಪ್ ನಾಯಕರು, ಅರುಣ್ ಜೇಟ್ಲಿ ಡಿಡಿಸಿಎ ಅಧ್ಯಕ್ಷರಾಗಿದ್ದಾಗ ಭ್ರಷ್ಟಾಚಾರ ನಡೆದಿದ್ದು ಅರುಣ್ ಜೇಟ್ಲಿ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು ಕೇಂದ್ರ ಸರ್ಕಾರ ಅರುಣ್ ಜೇಟ್ಲಿ ರಾಜೀನಾಮೆ ಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಆಗ್ರಹಿಸಿದ್ದಾರೆ.
ನಾವು ಪ್ರತಿ ಬಾರಿಯೂ ಡಿಡಿಸಿಎ ಹಗರಣದ ಬಗ್ಗೆ ಧ್ವನಿ ಎತ್ತಲು ಮುಂದಾದಾಗೆಲ್ಲಾ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಅದನ್ನು ವಿರೋಧಿಸುತ್ತಿತ್ತು ಎಂದು ವಿಶ್ವಾಸ್ ದೂರಿದ್ದಾರೆ. ದೆಹಲಿ ಸರ್ಕಾರ ರಚಿಸಿದ್ದ ಸಮಿತಿಯಿಂದ ಹಗರಣ ಬಯಲಿಗೆ ಬಂದಿದೆ. ಹಾಗಾಗಿ ಲಂಚ ಹಗರಣ ಮುಚ್ಚಿಹಾಕಲು ಜೇಟ್ಲಿ ಯತ್ನಿಸಿದ್ದಾರೆ ಎಂದರು.