ಪಂಜಾಬ್ : ಪಂಜಾಬ್ನ ಪಠಾಣಕೋಟ್ ಸೇನಾ ನೆಲೆ ಮೇಲೆ ಪಾಕ್ ಬೆಂಬಲಿತ ಉಗ್ರರ ದಾಳಿಗೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗಿದ್ದು, ಪಠಾಣಕೋಟ್ ನಾಗರಿಕರು ಪಾಕಿಸ್ತಾನ ಪ್ರತಿಕೃತಿಯನ್ನು ಸುಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಉಗ್ರರೊಂದಿಗಿನ ಚಕಮಿಕಿಯಲ್ಲಿ ನಾಲ್ವರು ದಾಳಿಕೊರರನ್ನು ಹೊಡೆದುರುಳಿಸಲಾಗಿದೆ. ಜತೆಗೆ ಇಬ್ಬರು ಸೈನಿಕರೂ ವೀರಮರಣವನ್ನಪ್ಪಿದ್ದಾರೆ. ಪ್ರತಿಭಟನಾಕಾರರು ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಬೆಳಗ್ಗೆ ನಡೆದ ಉಗ್ರರ ದಾಳಿಗೆ ಭಾರತದ ಸೇನಾಪಡೆ ಮತ್ತು ಪೊಲೀಸ್ ತಕ್ಕ ಉತ್ತರ ನೀಡಿದೆ. ಈಗಾಗಲೇ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ. ಇದಾದ ನಂತರ ಕೆಲತಾಸುಗಳ ವರೆಗೆ ಶಾಂತವಾಗಿದ್ದ ಸೇನಾನೆಲೆಯಲ್ಲಿ ಈಗ ಮತ್ತೇ ಸದ್ದು ಕೇಳುತ್ತಿದೆ. ಸೇನಾ ಹೆಲಿಕಾಪ್ಟರ್ಗಳ ಮೇಲೆ ಗುಂಡಿನ ದಾಳಿ ನಡೆದಿದೆ. ಹೀಗಾಗಿ ಇನ್ನೂ ಕೆಲ ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಸೇನಾಪಡೆಗಳು ಆಪರೇಶನ್ ಮುಂದುವರಿಸಿವೆ.