ಆಂಧ್ರಪ್ರದೇಶ: ವಿಷ್ಣುವಿನ ಅವತಾರದಲ್ಲಿ ಶೂಗಳನ್ನು ಹಿಡಿದು ಜಾಹೀರಾತು ನೀಡಿದ್ದ ಟೀಂ ಇಂಡಿಯಾದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಆಂಧ್ರಪ್ರದೇಶದ ಅನಂತಪುರಂ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.2013 ಎಪ್ರಿಲ್ 24ರಂದು ನಿಯತಕಾಲಿಕೆಯೊಂದರಲ್ಲಿ ವಿಷ್ಣುವಿನ ಅವತಾರದಲ್ಲಿ ಶೂಗಳನ್ನ ಹಿಡಿದ ಚಿತ್ರವೊಂದು ಪ್ರಕಟವಾಗಿತ್ತು. ಈ ಬಗ್ಗೆ ಅನಂತಪುರಂನ ವಿಹೆಚ್‌ಪಿ ಜಿಲ್ಲಾ ಉಪಾಧ್ಯಕ್ಷ ಶ್ಯಾಂಸುಂದರ್, ಧೋನಿ ವಿರುದ್ಧ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ದೂರು ದಾಖಲಿಸಿದ್ದರು. ಹೀಗಾಗಿ ಫೆ.25ರಂದು ಕೋರ್ಟಿಗೆ ಹಾಜರಾಗುವಂತೆ ಅನಂತಪುರಂನ ಜೆಎಂಎಫ್‌ಸಿ ಕೋರ್ಟ್ ವಾರೆಂಟ್ ಹೊರಡಿಸಿದೆ.
ಧೋನಿ ವಿರುದ್ಧ ಜಾಮೀನು ರಹಿತ ವಾರೆಂಟ್ - 1 min read
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.